ಸುರತ್ಕಲ್: ಜೋಕಟ್ಟೆಯ ಜನವಸತಿ ಪ್ರದೇಶದ ಮಧ್ಯೆ ಸ್ಥಾಪನೆಯಾಗಿರುವ ಕಲ್ಲಿದ್ದಲು ಮತ್ತು ಸಲ್ಫರ್ ಘಟಕಗಳಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಸದ್ರಿ ಕಂಪೆನಿಗಳನ್ನು ಈ ಕೂಡಲೇ ಮುಚ್ಚುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಮುಂಜಾನೆ ನೂರಾರು ಸಂಖ್ಯೆಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 500ರಷ್ಟು ಸಂಖ್ಯೆಯಲ್ಲಿದ್ದ ಗ್ರಾಮಸ್ಥರು ಮೆರವಣಿಗೆ ನಡೆಸಿ ಸ್ಥಳದಲ್ಲಿ ಧರಣಿ ಕೂತು ಕಂಪೆನಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಎಂಆರ್ಪಿಎಲ್ ಹಾಗೂ ಸೆಝ್ ಕಂಪೆನಿಗಳು ಊರಿಗೆ ಬಂದ ನಂತರ ಜನರ ಆರೋಗ್ಯ ಹದಗೆಟ್ಟಿದ್ದು, ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ನಾಗರಿಕರು ಈ ಸಂದರ್ಭ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಕಲ್ಲಿದ್ದಲು, ಸಲ್ಫರ್ ಘಟಕಗಳಿಂದಾಗಿ ಧೂಳಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಸ್ವಚ್ಛ ಗಾಳಿಯನ್ನು ಉಸಿರಾಡುವಂತಿಲ್ಲ. ಮಕ್ಕಳ ಆರೋಗ್ಯದ ಮೇಲೂ ಈ ಕಂಪೆನಿಗಳು ದುಷ್ಪರಿಣಾಮ ಬೀರುತ್ತಿವೆ ಎಂದು ಸಾರ್ವಜನಿಕರು ಆಕ್ರೋಶಿತರಾಗಿ ಹೇಳಿದರು. ಪಣಂಬೂರು, ಸುರತ್ಕಲ್ ಠಾಣಾ ಪೊಲೀಸರು ಬಂದೋಬಸ್ತ್ ವಹಿಸಿದ್ದರು. ನಂತರ ಸಂಬಂಧಪಟ್ಟ ಕಂಪೆನಿ ಅಧಿಕಾರಿಗಳಿಗೆ ಮನವಿ ಅಪರ್ಿಸಲಾಯಿತು.


