ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಹರೀಶ್ ಸುವರ್ಣ ಅಂಬೆಲೊಟ್ಟು ಆಯ್ಕೆ
ಕೈಕಂಬ : ಇಲ್ಲಿನ ಶ್ರೀ ರಾಮ ಕೃಷ್ಣ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ 44 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಬಾವಿ ಸಭೆಯು ರಾಮಕೃಷ್ಣ ಭಜನಾ ಮಂದಿರದಲ್ಲಿ ಮಂದಿರದ ಅಧ್ಯಕ್ಷ ಹರಿಶ್ಚಂದ್ರ ಗೌಡ ಕಜೆ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. 44 ನೇ ವರ್ಷದ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಹರೀಶ್ ಸುವರ್ಣ ಅಂಬೆಲೊಟ್ಟುಆಯ್ಕೆ

ಪ್ರದಾನ ಕಾರ್ಯದರ್ಶಿ ಅಜಯ್ ಅಮೀನ್ ನಾಗಂದಡಿ, ಗೌರವಾಧ್ಯಕ್ಷರಾಗಿ ಮೇಘರಾಜ್ ಜೈನ್ ಕೋಶಾಧಿಕಾರಿಯಾಗಿ ಕೆ ಅರ್ಜುನ್ ಪಂಡಿತ್, ಉಪಾಧ್ಯಕ್ಷರುಗಳಾಗಿ ಚಂದ್ರ ಶೇಖರ್ ಮಿತ್ತೊಟ್ಟು, ಪ್ರಸಾದ್ ಶೆಟ್ಟಿ ಕುಟ್ಟೆಚಾರು, ಶ್ರೀ ದೀಪಕ್ ಮುತ್ತೂರು, ಇವರಗಳನ್ನು ಆಯ್ಕೆ ಮಾಡಲಾಯಿತು. ಮಂದಿರದ ಜೊತೆ ಕಾರ್ಯದರ್ಶಿ ಶ್ರೀ ಅಶೋಕ್ ಕೆ ಸ್ವಾಗತಿಸಿ, ವಂದಿಸಿದರು,ಈ ಸಂದರ್ಭ ಶ್ರೀ ರಾಮ ಕೃಷ್ಣ ಭಜನಾ ಮಂದಿರದ ಪ್ರದಾನ ಕಾರ್ಯದರ್ಶಿ ಜಗದೀಶ್ ದುರ್ಗಾ ಕೊಡಿ, ಉಪಾಧ್ಯಕ್ಷ ನಾರಾಯಣ ಎಂ ಸುವರ್ಣ, ಪ್ರದಾನ ಅರ್ಚಕ ನಾಗರಾಜ್ ಭಟ್, ಮಂದಿರದ ಹಿರಿಯ ಸದಸ್ಯರು ಮತ್ತು ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಪ್ರಮುಖರು ಇದ್ದರು.