ಬಿ.ಸಿ.ರೋಡುವೆಂಕಟೇಶ ಪ್ರಭುನಿಧನ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ನಿವಾಸಿ, ಹಿರಿಯ ಉದ್ಯಮಿ ಶ್ರೀನಾಥ್ ಪ್ರಭು ಇವರ ಪುತ್ರ ವೆಂಕಟೇಶ ಪ್ರಭು (38) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ತಂದೆ, ತಾಯಿ, ಪತ್ನಿ, ಪುತ್ರ ಹಾಗೂ ಸಹೋದರ ಮತ್ತು ಸಹೋದರಿ ಇದ್ದಾರೆ. ಮೃತರು ಬಿ.ಸಿ.ರೋಡು ವಿಜಯಲಕ್ಷ್ಮಿ ಸ್ಟೀಲ್ ಸಂಸ್ಥೆ ಪಾಲುದಾರರಾಗಿ, ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಬಂಟ್ವಾಳದ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು.