15 ದಿನದೊಳಗೆ ಪರವಾನಿಗೆ ಪಡೆಯಿರಿ ಪುರಸಭೆಯಿಂದ ಸೂಚನೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವಸತಿ ನಿಲಯ ,ಪಿ.ಜಿ ನಡೆಸುತ್ತಿರುವ ಮಾಲಕರು ನಿಗದಿತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಮುಂದಿನ 15 ದಿನದ ಒಳಗಾಗಿ ಉದ್ಯಮ ಪರವಾನಿಗೆಯನ್ನು ಪಡೆದುಕೊಳ್ಳುವಂತೆಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ನಿಗದಿತ ಸಮಯದ ನಂತರ ಉದ್ಯಮ ಪರವಾನಿಗೆ ಇಲ್ಲದೆ ಕಾರ್ಯಾಚರಿಸುವ ವಸತಿ ನಿಲಯ,ಪಿ.ಜಿ.ಮಾಲಕರ ವಿರುದ್ಧ ಪುರಸಭಾ ಕಾಯ್ದೆಯನ್ವಯ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.