ಬಂಟ್ವಾಳ; ಇಲ್ಲಿಗೆ ಸಮೀಪದ ವಗ್ಗ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆ ಎಂಬಲ್ಲಿನ ಛಾಯಾಗ್ರಾಹಕರೊಬ್ಬರು ಮೃತ ಪಟ್ಟಿದ್ದಾರೆ. ಗುರುವಾಯನ ಕೆರೆಯಲ್ಲಿ ಕಾರ್ಯಾಚರಿಸುತ್ತಿರುವ ಸಿದ್ಧಾರ್ಥ ಸ್ಟುಡಿಯೋ ಮಾಲಕ ಗೇರುಕಟ್ಟೆ ನಿವಾಸಿ ಜಗದೀಶ ಆರಿಗ (35) ಮೃತ ಪಟ್ಟವರಾಗಿದ್ದಾರೆ.

ಇವರು ಎಸ್.ಕೆ.ಪಿ.ಎ ಬೆಳ್ತಂಗಡಿ ವಲಯದ ಉಪಾಧ್ಯಕ್ಷರೂ ಕೂಡಾ ಆಗಿದ್ದಾರೆ . ಇವರು ತನ್ನ ಬೈಕಿನಲ್ಲಿ ಮಂಗಳೂರಿನಿಂದ ಗುರುವಾಯನಕೆರೆಗೆ ತೆರಳುತ್ತಿದ್ದಾಗ ಅತೀವೇಗ ಹಾಗೂ ಅಜಾಗರೂಕತೆಯಿಂದ ಧಾವಿಸಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಜಗದೀಶ್ ಆರಿಗ ಅವರು ಗಂಭೀರ ಸ್ವರೂಪದ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾರೂ ಅವರು ದಾರಿ ಮಧಯೆದಲ್ಲಿ ಕೊನೆಯುಸಿರಳೆದಿದ್ದಾರೆಂದು ತಿಳಿದು ಬಂದಿದೆ. ಸುದ್ಧಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡರು. ಜಗದೀಶ ಅವರ ಧಾರುಣ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಎಸ್.ಕೆ.ಪಿ.ಎ ಪದಾಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಬಂಟ್ವಾಳ ವಲಯ ಎಸ್.ಕೆ.ಪಿ. ಇವರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದೆ.
