ಬಂಟ್ವಾಳ: ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಡಿ ಗರಿಷ್ಟ ಕಾಮಗಾರಿ ಅನುಷ್ಠಾನ ಮತ್ತು ಗರಿಷ್ಟ ಮಾನವ ದಿನಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಮೂಲಕ ತಾಲ್ಲೂಕಿನಲ್ಲಿ ಎರಡನೇ ಸ್ಥಾನ ಗಳಿಸಿದೆ.


ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಪಿಡಿಒ ಧರ್ಮರಾಜ್ ದಡ್ಡು, ಡಾಟಾ ಅಪರೇಟರ್ ಅಶ್ವಿನಿ ಚಂದ್ರಶೇಖರ ಗೌಡ, ತೋಟಗಾರಿಕಾ ಮತ್ತು ಸಿವಿಲ್ ತಾಂತ್ರಿಕ ಸಹಾಯಕಿಯರಾದ ಸಮ್ಮೇದಾ ಡಿ.ಜೈನ್ ಮತ್ತು ನಯನಾ ಬಿ.ಜಿ. ಇವರಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಅಭಿನಂದನಾ ಪತ್ರ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *