ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್(ರಿ.) ಅಲೆತ್ತೂರು ಇದರ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಆಯ್ಕೆ
ಬಂಟ್ವಾಳ:2024-25 ನೇ ಸಾಲಿನ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 44 ನೇ ಸಾಲಿನ
ವಾರ್ಷಿಕ ಮಹಾ ಸಭೆಯು ಜೂನ್ 30 ರಂದು ಭಾನುವಾರ ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಬಿ. ಸಿ. ರೋಡು ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷರಾಗಿ ದಿನೇಶ್ ಸುವರ್ಣ ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರ ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್ ಸಂಘಟನನಾ ಕಾರ್ಯದರ್ಶಿ ನಿತಿನ್ ಶೆಟ್ಟಿ ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್ ಜೊತೆ ಕ್ರೀಡಾ ಕಾರ್ಯದರ್ಶಿ ಸ್ರಜನ್ ಕಾರ್ಯಕಾರಿ ಸಮಿತಿಯಾಗಿ ವಿಜಯ್ ಸುವರ್ಣ, ನಿತಿನ್ ಪೂಜಾರಿ , ಪ್ರಶಾಂತ್,ಅಶ್ವಥ್ ಶೆಟ್ಟಿ, ಶಿವರಾಜ್ ಕೊಡಂಗೆ, ಗೌರವ್ ಕೈಕುಂಜೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ. ಮೋಹನ್ ಬಿ. ಸಿ. ರೋಡು ಮೋನಪ್ಪ ಪೂಜಾರಿ ಅಲೆತ್ತೂರು, ಪರಮೇಶ್ವರ ಶೆಟ್ಟಿ ಅಲೆತ್ತೂರು , ಹಿಮಕರ ಪೂಜಾರಿ, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.