ಬಿಜೆಪಿ ಮಹಿಳಾ ಮೋರ್ಛಾದಿಂದ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ
ಬಂಟ್ವಾಳ: ಬಿಜೆಪಿ ಮಹಿಳಾ ಮೋರ್ಚಾ ಕೊಳ್ನಾಡು ಮಹಾಶಕ್ತಿ ಕೇಂದ್ರದ ವತಿಯಿಂದ ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.
![](https://www.suddi9.com/wp-content/uploads/2024/06/IMG-20240627-WA0114-650x308.jpg)
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90% ಅಂಕ ಗಳಿಸಿ ಉತ್ತೀರ್ಣಳಾದ ಮಂಚಿ ಸುಳ್ಯ ರಮೇಶ್ ನಾಯಕ್ ಹಾಗೂ ಶೈಲಜಾ ದಂಪತಿಯ ಪುತ್ರಿ ಕು. ಲಿಖಿತಾ ಮತ್ತು 91% ಅಂಕ ಗಳಿಸಿ ಉತ್ತೀರ್ಣಳಾದ ಕಂಚಿಲ ಮೋನಪ್ಪ ನಾಯ್ಕ ಮತ್ತು ರೇವತಿ ದಂಪತಿಯ ಪುತ್ರಿ ಕು.ಬಿಂದುಶ್ರೀ ಅವರನ್ನುಅಭಿನಂದಿಸಲಾಯಿತು.
![](https://www.suddi9.com/wp-content/uploads/2024/06/IMG-20240627-WA0108-650x302.jpg)
ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಛಾ ಕೊಳ್ನಾಡು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷೆ ವಿಜಯ ನಾಯಕ್, ಬೂತ್ ಸಮಿತಿ ಅಧ್ಯಕ್ಷರಾದ ರಾಜೇಶ್ ನೂಜಿಪ್ಪಾಡಿ, ಮಂಚಿ ಗ್ರಾಮ ಪಂಚಾಯತ್ ಸದಸ್ಯರಾದ ವನಜಾಕ್ಷಿ, ಬಿಜೆಪಿ ಮಂಚಿ ಶಕ್ತಿ ಕೇಂದ್ರದ ಸಹ ಪ್ರಮುಖರಾದ ರಮೇಶ್ ರಾವ್ ಪತ್ತುಮುಡಿ, ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕೇಶವ ರಾವ್ ನೂಜಿಪ್ಪಾಡಿ ಉಪಸ್ಥಿತರಿದ್ದರು.