ದುಬೈ: ಗಾಣಿಗ ಫ್ಯಾಮಿಲಿ ವತಿಯಿಂದ ‘ಗಾಣಿಗ ಸಂಗಮ’
ಬಂಟ್ವಾಳ :ದುಬೈ ಗಾಣಿಗ ಫ್ಯಾಮಿಲಿ ಹೆಸರಿನಲ್ಲಿ ಸಂಘಟನೆ ಶಿಕ್ಷಣ ಮತ್ತು ಧಾರ್ಮಿಕತೆ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಒತ್ತು ನೀಡುವ ಸಂಘಟನೆ ಇತರರಿಗೆ ಮಾದರಿಯಾಗಿ ಬೆಳೆಯುತ್ತಿದೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹೇಳಿದರು.

ಇಲ್ಲಿನ ಪಾಣೆಮಂಗಳೂರು ಮರ್ಧೋಳಿ ಸುಪ್ರೀತ್ ಗಾಣಿಗ ನೇತೃತ್ವದಲ್ಲಿ ದುಬೈ ಗಾಣಿಗ ಫ್ಯಾಮಿಲಿ ವತಿಯಿಂದ ಕರಾಮ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಗಾಣಿಗ ಸಂಗಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘಟಕ ಸುಪ್ರೀತ್ ಗಾಣಿಗ ಮರ್ಧೋಳಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಒಳಾಂಗಣ ಕ್ರೀಡೆ ಸಹಿತ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.ಕ್ಷಿತಿ ಕುಮಾರಿ ಸ್ವಾಗತಿಸಿ, ವಂದಿಸಿದರು. ಅನಿರುದ್ದ್ ಮತ್ತು ಸುಶಾನ ಕಾರ್ಯಕ್ರಮ ನಿರೂಪಿಸಿದರು.