ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆ
ಬಂಟ್ವಾಳ: ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ೨೦೨೪–೨೫ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಬುಧವಾರ ನಡೆಯಿತು. ಪ್ರಾಂಶುಪಾಲರಾದ ಜೂಲಿ ಟಿ.ಜೆ ಹಾಗೂ ಉಪಪ್ರಾಂಶುಪಾಲರಾದ ಪೂರ್ಣೇಶ್ವರಿ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಮುಖ್ಯ ಚುನಾವಣಾಧಿಕಾರಿ ನಮಿತಾಂಜಲಿ ಅವರ ಮಾರ್ಗದರ್ಶನದಂತೆ, ಶಿಕ್ಷಕಿಯರಾದ ಸಿರಿಷಾ ನೀಲಂ, ಹರ್ಷಿತಾ ಬಿ., ವಸಂತಿ ಹಾಗೂ ಹರೀಶ್ ಆಚಾರ್ಯ ಕರ್ತವ್ಯ ನಿರ್ವಹಿಸಿದರು. ಆರನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುರೇಖಾ ಎಸ್ ರೈ ಅವರ ನೇತೃತ್ವದಲ್ಲಿ ಮತ ಎಣಿಕೆ ನಢಯಿತು. ಶಾಲಾನಾಯಕನಾಗಿ ಕೀತ್ ಈವನ್ ಅಲ್ವಾರೀಸ್ ಹಾಗೂ ಉಪನಾಯಕಿಯಾಗಿ ಚಿನ್ಮಯಿ ಶೆಟ್ಟಿ ಆಯ್ಕೆಯಾದರು. ವಿಜೇತರನ್ನು ಶಾಲಾ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.