ಉಡುಪಿ: ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢವಾಗಿ ನಾಪತ್ತೆಯಾಗಿ 16 ದಿನಗಳು ಸಂದಿದ್ದು, ಆಕೆ ಮುಂಬೈಯ ಭಿವಂಡಿ ಎಂಬಲ್ಲಿ ಪತ್ತೆಯಾಗಿದ್ದಾಳೆ ಎಂದು ಸುದ್ದಿ ಹರಡಿತ್ತು. ಆದರೆ ಇದು ಸುಳ್ಳೆಂಬ ಅಭಿಪ್ರಾಯ ಪೊಲೀಸ್ ಮೂಲಗಳಿಂದ ವ್ಯಕ್ತವಾಗಿದೆ. ಕಳೆದ ನವೆಂಬರ್ 15ರಂದು ನಾಪತ್ತೆಯಾಗಿದ್ದ ಇಶಿಕಾಳನ್ನು ಪತ್ತೆಹಚ್ಚಲು ಪೊಲೀಸರು ಎಂಟು ತಂಡಗಳನ್ನು ರಚಿಸಲಾಗಿದ್ದು, ಆಕೆಯನ್ನು ಪತ್ತೆಹಚ್ಚಲು ಮಾತ್ರ ಸಾಧ್ಯವಾಗಿಲ್ಲ. ಇದರೊಂದಿಗೆ ಈಕೆಯನ್ನು ಅಪಹರಿಸಿ ಕೇರಳಕ್ಕೆ ಸಾಗಿಸಿರಬಹುದೇ ಎಂಬ ಸಂಶಯವೂ ಸಾರ್ವಜನಿಕರ ವಲಯದಿಂದ ಕೇಳಿಬಂದಿದೆ.


ಇಶಿಕಾ ಇನ್ನೂ ಹದಿಮೂರರ ಬಾಲಕಿ ಅವಳು ತಾನಾಗಿಯೇ ಅಷ್ಟೊಂದು ಕರಾರುವಾಕ್ ಐಡಿಯಾ ಮಾಡಲಾರಳು
ಇವಳ ಮನೋದೌರ್ಬಲ್ಯದ ಲಾಭ ಪಡೆದ ಮೂರನೇ ವ್ಯಕ್ತಿಯೊಬ್ಬ ಖಂಡಿತಾ ಇರಲೇಬೇಕು
ಆ ದಿನ ಆ ಪರಿಸರದಲ್ಲಿ ಯಾವ ಯಾವ ನಂಬರ್ ಇತ್ತು ಎಂಬ ದಿಸೆಯಲ್ಲಿ ತನಿಖೆ ಮಾಡಿದರೆ ಏನಾದರು ಕ್ಲೂ ಸಿಕ್ಕೀತು