ಬಂಟ್ವಾಳ: ಮಕ್ಕಳು  ದುಶ್ಚಟಕ್ಕೆ ಬಲಿಯಾಗದಂತೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಹೆತ್ತವರು ಮಾಡಬೇಕು ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಹೇಳಿದರು.   ಬಂಟ್ವಾಳ ತಾಲೂಕಿನ ಕಲ್ಲಡ್ಕ ಪೂರ್ಲಿಪಾಡಿ
“ಸುರಕ್ಷಾ ಸಂಗಮ(ರಿ ) ಇದರ ಆಶ್ರಯದಲ್ಲಿ ಕಲ್ಲಡ್ಕ ಮರಾಠಿ ಭವನ ದಲ್ಲಿ ಜರಗಿದ “ಸುರಕ್ಷಾ ಗೌಜಿ ಗಮ್ಮತ್- 2024” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಮನೆ ,ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಗಮನ ಹರಿಸಬೇಕು ಎಂದರು. 

ಈ ಸಂದರ್ಭದಲ್ಲಿ ಕಾಂಪ್ರಬೈಲು ದೇವಸ್ಥಾನದ ಅಣ್ಣಪ್ಪ ಪಂಜುರ್ಲಿ ದೈವದ ಚಾಕಿರಿಧಾರರಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣಪ್ಪ ಪೂಜಾರಿ ಕುದ್ರೆಬೆಟ್ಟು  ಇವರನ್ನು ಸನ್ಮಾನಿಸಲಾಯಿತಲ್ಲದೆ ಈ ಸಾಲಿನ ಎಸ್. ಎಸ್ .ಎಲ್. ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ಥಳೀಯ ಮೂವರು ವಿದ್ಯಾರ್ಥಿಗಳಾದ ಯತೀಶ್ ಕುಮಾರ್, ನಿಶಾ, ಸಂಪತ್ ಕುಮಾರ್  ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ನಡೆದ ಸ್ಥಳೀಯ ಮಕ್ಕಳು, ಮಹಿಳೆಯರು, ಪುರುಷರಿಗೆ  ಬೆಳಿಗ್ಗೆಯಿಂದ ಸಂಜೆಯ ತನಕ ವಿವಿಧ ರೀತಿಯ ಒಳಾಂಗಣ ಸ್ಪರ್ಧೆಗಳ ವಿಜೇತರಿಗೆ  ಬಹುಮಾನ ವಿತರಿಸಲಾಯಿತು.   

              
ಬಾಳ್ತಿಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ,ಹಾಲಿ ಸದಸ್ಯೆ ಹಿರಣ್ಮಯೀ , ಕನ್ಯಾಡಿ ಶ್ರೀರಾಮ ಮಂದಿರದ ಸಂಚಾಲಕ  ಕೃಷ್ಣಪ್ಪ ಪೂಜಾರಿ ತೋಟ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಉದ್ಯಮಿಗಳಾದ ನವಾಜ್, ವೆಂಕಟರಾಯ ಪ್ರಭು ,ಸಂಘದ ಉಪಾಧ್ಯಕ್ಷರಾದ ಜಯಪ್ರಶಾಂತ್,  ಕಾರ್ಯದರ್ಶಿ ವಿಕೇಶ್ ತೋಟ ಮೊದಲಾದವರು ಉಪಸ್ಥಿತರಿದ್ದರು. ಸುರಕ್ಷಾ ಸಂಗಮದ ಅಧ್ಯಕ್ಷ ನಿತಿನ್ ಸ್ವಾಗತಿಸಿದರು. ಯೋಗೀಶ್ ತೋಟ  ವಂದಿಸಿದರು, ಯತಿನ್ ಕುಮಾರ್ ಏಳ್ತಿಮಾರ್  ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *