ಬಂಟ್ವಾಳ :ಕರಾವಳಿ ಜಾನಪದ ಕಲಾ ತಂಡದಿಂದ ಅಲ್ಲಿಪಾದೆ ಹಾಗೂ ಪಾಣೆಮಂಗಳೂರಿನಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಸಲಾಯಿತು.   ಅಲ್ಲಿಪಾದೆಯಲ್ಲಿ ಶ್ರಿ ರಾಮ್ ಯಶಸ್ವಿ ಹಾಗೂ ಪಾಣೆಮಂಗಳೂರಿನಲ್ಲಿ‌ದುರ್ಗಾಂಭ
ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿಬೀದಿ ನಾಟಕ ನಡೆಯಿತು.

ಅಲ್ಲಿಪಾದೆಯಲ್ಲಿ‌ ಒಕ್ಕೂಟದ ಮಾಜಿ  ಅಧ್ಯಕ್ಷರು ಕೃಷ್ಣಪ್ಪ ಪೂಜಾರಿ,ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಅಲ್ಲಿಪಾದೆ ಒಕ್ಕೂಟ ಅಧ್ಯಕ್ಷರಾದ ನವೀನ್ ದೇವಸ್ಯಪಡೂರು, ಗೀತಾ ಜಾನಪದ ಕಲಾ ತಂಡದ ಗಿರೀಶ್ ನಾವಲೇ,ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಎಂ  ರವರು ದೀಪ ಬೆಳಗಿಸಿ ಟಮ್ಕಿ ಬಾರಿಸುವ ಮೂಲಕ  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಒಕ್ಕೂಟ ಅಧ್ಯಕ್ಷೆ ಹರಿಣಾಕ್ಷಿ , ಒಕ್ಕೂಟದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಅಮಿತ ದೀಪ ಬೆಳಗಿಸಿ ಟಮ್ಕಿ ಬಾರಿಸುವ ಮೂಲಕ  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ  ಬಗ್ಗೆ ಮಾಹಿತಿಯನ್ನು ನೀಡಿದರು .
ಕರಾವಳಿ ಜಾನಪದ ಕಲಾ ತಂಡದವರಿಂದ ನೀರು ಮತ್ತು ನೈರ್ಮಲ್ಯದ ಬಗ್ಗೆ .ನೀರು ಅತ್ಯ ಅಮೂಲ್ಯ , ನೀರು ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ ,ಕುಡಿಯುವ ನೀರಿನ ಮಹತ್ವ ಮತ್ತು ಸದ್ಬಳಕೆ ಅಗತ್ಯ, ಪ್ರತಿಯೊಬ್ಬರೂ ನೆಲ -ಜಲ, ಅಂತರ್ಜಲ ಹೆಚ್ಚಳ ಮತ್ತು ಮಳೆನೀರು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಉಳಿಕೆ, ಮತ್ತು ಬಳಕೆಯ ಬಗ್ಗೆ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದರು.
ಒಕ್ಕೂಟ ಪದಾಧಿಕಾರಿಗಳು ಶ್ರೀರಾಮ ಭಜನಾ ಮಂಡಳಿ ಪದಾಧಿಕಾರಿಗಳು,  ವಲಯದ ಮೇಲ್ಪೀಚಾರಕರಾದ ರೂಪ ರೈ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರುತಿ, ಸೇವಾ ಪ್ರತಿನಿಧಿ ವಸಂತಿ, ವಿಜಯ ಕಲಾತಂಡದವರು ಹಾಗೂ ,ಪ್ರಗತಿ ಬಂದು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *