ಮಾಣಿಲಕ್ಷೇತ್ರದಲ್ಲಿ ಜೂ.30ರಿಂದ ವರಮಹಾಲಕ್ಷ್ಮಿ ವ್ರತಾಚರಣೆ,ಸಮಾಲೋಚನಾ ಸಭೆ
ಬಂಟ್ವಾಳ: ಮಾಣಿಲ ಶ್ರೀಮಹಾಲಕ್ಷ್ಮಿಕ್ಷೇತ್ರದಲ್ಲಿ ಜೂನ್ 30ರಿಂದ ಆ.16ರ ವರೆಗೆ 48 ದಿನ ವರಮಹಾಲಕ್ಷ್ಮಿ ವ್ರತಾ ಚರಣೆ, ಬೆಳ್ಳಿಹಬ್ಬ ಸಮಾರೋಪ ನಡೆಯಲಿದ್ದು, ಪ್ರತಿದಿನ ಭಕ್ತರಿಂದ ಭಜನಾ ಸಂಕೀರ್ತನೆ, ಹೊರೆಕಾಣಿಕೆ ಸಮರ್ಪಣೆ ಯಾಗಲಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡು ರಕ್ತೇಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಪೂರ್ವಭಾವಿ ಸಮಾಲೋಚನಾಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಕೇಂದ್ರ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಂತ್ರಿಗಳಾದ ಪ್ರಸಾದ್ ಪಾಂಗಣ್ಣಾಯ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಎ.ತುಂಗಪ್ಪ ಬಂಗೇರ, ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ್ ಸಲಹೆ ನೀಡಿದರು, ಪ್ರಮುಖರಾದ ವೀರೇಂದ್ರ ಕುಮಾರ್ ಜೈನ್ ಕಕ್ಕಪದವು. ಕೃಷ್ಣರಾಜ ಜೈನ್ ಪಂಜಿಕಲ್ಲು, ಮಚ್ಚೇಂದ್ರನಾಥ ಸಾಲ್ಯಾನ್, ನಾರಾಯಣ ಪೆರ್ನೆ, ಜನಾರ್ದನ ಬೊಂಡಾಲ ಭಾಗವಹಿಸಿದ್ದರು.
ಟಿ.ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಚ್‌ಕೆ.ನಯನಾಡು ಸ್ವಾಗತಿಸಿ, ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು.