ಭಾರತೀಯ ಜನತಾ ಪಾರ್ಟಿ ಮಂಗಳೂರು ಪೂರ್ವಭಾವಿ ಚುನಾವಣಾ ಕಾರ್ಯನಿರ್ವಹಣಾ ತಂಡದ ಪ್ರಥಮ ಸಭೆ
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಲೋಕಸಭಾ ಚುನಾವಣಾ ಪೂರ್ವಭಾವಿಯಾಗಿ ಚುನಾವಣಾ ಕಾರ್ಯನಿರ್ವಹಣಾ ತಂಡದ ಪ್ರಥಮ ಸಭೆಯು ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಇವರ ನೇತೃತ್ವದಲ್ಲಿ ಕಾವೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಪ್ರಸಾದ್ ಕುಮಾರ್, ಮಂಗಳೂರು ನಗರ ಉತ್ತರ ಅಧ್ಯಕ್ಷರು ರಾಜೇಶ್ ಕೊಟ್ಟಾರಿ, ಮಂಡಲದ ಚುನಾವಣಾ ಪ್ರಭಾರಿ ರೂಪ ಡಿ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ ಹಾಗೂ ರಣ್ ದೀಪ್ ಕಾಂಚನ್, ಜಿಲ್ಲಾ ಉಪಾಧ್ಯಕ್ಷರು ಪೂಜಾ ಪೈ ಹಾಗೂ ಶಾಂತಿ ಪ್ರಸಾದ್ ಹೆಗ್ಡೆ, ಚುನಾವಣಾ ನಿರ್ವಹಣಾ ತಂಡದ ಸಹ ಸಂಚಾಲಕ ಲೋಹಿತ್ ಅಮೀನ್ ಹಾಗೂ ಚುನಾವಣಾ ಕಾರ್ಯ ನಿರ್ವಹಣಾ ತಂಡದ ಸದಸ್ಯರು ಉಪಸ್ಥಿತರಿದ್ದರು.