ಸಿದ್ದಕಟ್ಟೆ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬೋಜನಾಲಯ, ಬಯಲು ರಂಗಮಂಟಪಕ್ಕೆ ಶಂಕು ಸ್ಥಾಪನೆ
ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗದಲ್ಲಿ ಬೋಜನಾಲಯ ಹಾಗೂ ಬಯಲು ರಂಗಮಂಟಪಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ರಾವ್ ಅವರು ಶಿಲಾನ್ಯಾಸ ನೆರವೇರಿಸಿ ಶುಭಹಾರೈಸಿದರು. ಶ್ರೀ ಕ್ಷೇತ್ರ ಪೂಂಜಾದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಅವರು ವೈಧಿಕ ವಿಧಿವಿಧಾನ ನೆರವೇರಿಸಿದರು.
ಮುಖ್ಯ ಅತಿಥಿಯಾಗಿದ್ದ ಸ್ಥಳೀಯ ಹಿರಿಯರಾದ ಅರ್ಕಕೀರ್ತಿ ಇಂದ್ರ ಅವರು ಶಾಲೆಯ ಅಭಿವೃದ್ದಿಗೆ ಗ್ರಾಮಸ್ಥರು ಸಹಕರಿಸುವಂತೆ ಕೋರಿದರು.
ಪ.ಪೂ.ಕಾಲೇಜಿನ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಉಮೇಶ್ ಗೌಡ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಕುಲಾಲ್, ಗ್ರಾಪಂ. ಸದಸ್ಯರಾದ ದೇಜಪ್ಪ ಕರ್ಕೇರ, ಚಂದ್ರ ಕೋರ್ಯಾರು,ಸುರೇಂದ್ರ, ಶೇಖರ ಶೆಟ್ಟಿ, ನ್ಯಾಯವಾದಿ ಸುರೇಶ್ ಶೆಟ್ಟಿ, ಉದ್ಯಮಿಗಳಾದ ರಾಘವೇಂದ್ರ ಭಟ್, ಮೈಕಲ್ ಡಿಕೋಸ್ತಾ, ತಾ.ಪಂ.ಮಾಜಿ ಸದಸ್ಯ ವಸಂತ ಅಣ್ಣಳಿಕೆ, ಕಿರಣ್ ಮಂಜಿಲ, ಎಸ್ ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ಮೊದಲಾದವರಿದ್ದರು.