ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನ ಸಂಪನ್ನ
ಕೈಕಂಬ: ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಜ.26ರಂದು ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಬ್ರಹ್ಮ ಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿ ಇವರ ನೇತೃತ್ವದಲ್ಲಿ ಪುಣ್ಯಾಹ, ಗಣಪತಿ ಹೋಮ, ಶ್ವಶಾಂತಿ, ಚೋರಶಾಂತಿ, ಅದ್ಭುತ ಶಾಂತಿ ಹೋಮ ನೆರವೇರಿತು.

ಅಮುಂಜೆಗುತ್ತು ಜೀವರಾಜ್ ಶೆಟ್ಟಿ ಹಾಗೂ ಶ್ರೀಮತಿ ನಯನ ಜಿ. ಶೆಟ್ಟಿ ದಂಪತಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಅಮುಂಜೆಗುತ್ತು ಕೃಷ್ಣಕುಮಾರ ಪೂಂಜ, ಅಮುಂಜೆಗುತ್ತು ಸಂತೋಷ್ ಶೆಟ್ಟಿ, ಅಮುಂಜೆಗುತ್ತು ರಂಗನಾಥ್ ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಅಮುಂಜೆಗುತ್ತು ಲಕ್ಷ್ಮೀಪ್ರಸಾದ್ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ದಕ್ಷರಾಜ್ ಶೆಟ್ಟಿ ಅಮುಂಜೆಗುತ್ತು, ನಿಕ್ಷಾ ನಾಯ್ಕ್ ಅಮುಂಜೆಗುತ್ತು, ಅಮುಂಜೆಗುತ್ತು ಪ್ರಫುಲ್ಲ ವಿ. ಶೆಟ್ಟಿ, ಅಮುಂಜೆಗುತ್ತು ಜ್ಯೋತಿ ಎ. ಶೆಟ್ಟಿ, ಅಮುಂಜೆಗುತ್ತು ನಾಗವೇಣಿ ಡಿ. ಶೆಟ್ಟಿ, ಅಮುಂಜೆಗುತ್ತು ವನಿತಾ ಎಸ್. ರೈ, ರಕ್ಷಾ ಮಲ್ಲಿ ಅಮುಂಜೆಗುತ್ತು ಉಪಸ್ಥಿತರಿದ್ದರು.

ಅಪರಾಹ್ನ 3:00ಗಂಟೆಯಿಂದ ಶ್ರೀ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಬಳಿಕ ಸಂಜೆ 5:00ರಿಂದ ದುರ್ಗಾ ಪೂಜೆ, ಮಂಟಪ ಸಂಸ್ಕಾರ, ಮಹಾಬಲಿ ಪೀಠಾಧಿವಾಸ, ಕ್ಷೇತ್ರಪಾಲಾಧಿವಾಸ ಪೂಜೆ ಜರುಗಲಿದೆ.
ಸಂಜೆ 6:00 ಗಂಟೆಯಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಬಿ. ಜನಾರ್ಧನ ಅಮುಂಜೆ ಸಂಯೋಜನೆಯ “ಭಸ್ಮಾಸುರ ಮೋಹಿನಿ – ಶಬರಿಮಲೆ ಅಯ್ಯಪ್ಪ” ಯಕ್ಷಗಾನ ಬಯಲಾಟ ನಡೆಯಲಿರುವುದು.