ಬಂಟ್ವಾಳ:ಬಂಟರ ಸಂಘದ ಬಂಟ್ವಾಳ ತಾಲೂಕಿನ ವಾಮದಪದವು ವಲಯದ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾಥರ್ಿವೇತನ ವಿತರಣೆ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ವಾಮದಪದವಿನ ಶ್ರೀ ಗಣೇಶ ಮಂದಿರದಲ್ಲಿ ನ.29 ರಂದು ಜರಗಿತು.
ಬಂಟರ ಸಂಘ ಬಂಟ್ವಾಳ ತಾಲೂಕಿನ ಉಪಾಧ್ಯಕ್ಷ , ಉದ್ಯಮಿ ಕಿರಣ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ಯುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಬಂಟ ಸಮುದಾಯ ಮಹತ್ತರ ಪಾತ್ರ ವಹಿಸಿದೆ.
ಸರ್ವ ಧರ್ಮ ಸಹಿಷ್ಣುತೆಯಿಂದ ಯಶಸ್ವಿಯಾಗಲು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಮುದಾಯದ ಉನ್ನತಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಲು ವ್ಯವಸ್ಥಿತ ಸಂಘಟನೆ ಅಗತ್ಯಎಂದು ಹೇಳಿದರು.

ಬಂಟರ ಸಂಘ ವಾಮದಪದವು ವಲಯದ ನೂತನ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ ಸಮುದಾಯದ ಸಾಧಕರು ತಮ್ಮ ಸಾಧನೆಯಿಂದ ಸಮಾಜಕ್ಕೆ ಮಾದರಿಯಾಗಿ ಘನತೆ ,ಗೌರವವನ್ನು ಎತ್ತಿಹಿಡಿದಿದ್ದಾರೆ.ಅವರನ್ನು ಗುರುತಿಸಿ ಗೌರವಿಸುವುದು ಇತರರರಿಗೆ ಪ್ರೇರಣೆಯಾಗಲಿ ಗ್ರಾಮೀಣ ಪ್ರದೇಶದಲ್ಲಿ ಬಂಟ ಸಮುದಾಯ ಸಂಘಟನೆಯಿಂದ ಬಲಾಢ್ಯವಾಗಿ ಸಮಾಜ ಬಂಧುಗಳಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.
ವಾಮದಪದವು ವಲಯ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಅಮ್ಮು ರೈ ಹರ್ಕಾಡಿ ಅವರು ನೂತನ ಸಮಿತಿ ಪದಾಧಿಕಾರಿಗಳಿಗೆ ಹೂಗುಚ್ಛ ನೀಡುವ ಮೂಲಕ ಪದಗ್ರಹಣ ನಡೆಯಿತು. ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ,ಮಹಿಳಾ ವೇದಿಕೆ ಕಾರ್ಯದರ್ಶಿ ಆಶಾಪ್ರಸಾದ್ ರೈ,ವಾಮದಪದವು ವಲಯದ ಗೌರವಾಧ್ಯಕ್ಷ ಭೋಜರಾಜ ಶೆಟ್ಟಿ ಕೊರಗಟ್ಟೆ ,ಬಂಟ್ವಾಳ ತಾಲೂಕು ಪದಾಧಿಕಾರಿಗಳಾದ ಸದಾನಂದ ಶೆಟ್ಟಿ ,ವಸಂತ ಶೆಟ್ಟಿ ,ವಾಮದಪದವು ವಲಯ ಪದಾಧಿಕಾರಿಗಳಾದ ಮೋಹನ ಶೆಟ್ಟಿ ನರ್ವಲ್ದಡ್ಡ ,ರವೀಂದ್ರ ಶೆಟ್ಟಿ ಕಮ್ಮಾಜೆ,ಶ್ರೀಮತಿ ಎಸ್. ಶೆಟ್ಟಿ,ಯತೀಶ್ ಶೆಟ್ಟಿ ,ನಾಗರಾಜ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ:
ಉದ್ಯಮಿ ತಿಮ್ಮಪ್ಪ ನಾಯಕ್ ನಡಿಗುತ್ತು (ಸಮಾಜ ಸೇವೆ),ಹಿರಿಯ ಯಕ್ಷಗಾನ ಅರ್ಥದಾರಿ ವಾಸು ಶೆಟ್ಟಿ ಕುತ್ಲೋಡಿ(ಯಕ್ಷಗಾನ),ಪ್ರಗತಿಪರ ಕೃಷಿಕ ಪದ್ಮನಾಭ ಶೆಟ್ಟಿ ಕುಂಡೋಳಿ (ಕೃಷಿ),ನಿವೃತ್ತ ಶಿಕ್ಷಕ ಸುಂದರ ಶೆಟ್ಟಿ ಬಜೆ(ಶಿಕ್ಷಣ),ಕಂಬಳ ಪ್ರಧಾನ ತೀರ್ಪು ಗಾರ ಎಂ.ರಾಜೀವ ಶೆಟ್ಟಿ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ),ಮೋಕ್ಷಿತ್ ಎಂ.ಶೆಟ್ಟಿ ,ಕು|ಸೋನಿ ಶೆಟ್ಟಿ ,ಕು|ಸಹನಾ ಎಂ.ಶೆಟ್ಟಿ,ಸಾತ್ವಿಕ್ ಎಲ್.ರೈ,ಕು|ಗೀತಾ ಎಸ್ .ಶೆಟ್ಟಿ ,ಲವೀಶ್(ಪ್ರತಿಭಾನ್ವಿತ ವಿದ್ಯಾರ್ಥಿಗಳು)ಅವರನ್ನು ಸಮ್ಮಾನಿಸಲಾಯಿತು. ವಾಮದಪದವು ವಲಯದ ಬಂಟಸಮಾಜದ 75 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಯತೀಶ್ ಶೆಟ್ಟಿ,ಯಶೋಧರ ಶೆಟ್ಟಿ ದಂಡೆ,ನಿಶ್ಚಿತ್ ಶೆಟ್ಟಿ,ನಾಗರಾಜ ಶೆಟ್ಟಿ ,ಸತೀಶ್ ಪೂಂಜ,ರವೀಂದ್ರ ಕಮ್ಮಾಜೆ ಅವರು ಸಮ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಅಕ್ಷರಭಾರತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮೋಹನ ಎಸ್.ಸಹಕರಿಸಿದರು.
ವಾಮದಪದವು ವಲಯದ ಸಂಘಟನಾ ಕಾರ್ಯದರ್ಶಿ ಮೋಹನ್ ರೈ ಆಲದಪದವು ಅವರು ಸ್ವಾಗತಿಸಿದರು.ಪುರುಷೋತ್ತಮ ಶೆಟ್ಟಿ ವಂದಿಸಿದರು.ಶಿಕ್ಷಕ ಉದಯಕುಮಾರ್ಶೆಟ್ಟಿ ,ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
