Published On: Mon, Dec 11th, 2023

ವಿಜಿಸಿ ಟ್ರಸ್ಟ್ ನಿಂದ ಉಳ್ಳಾಲ. ಉಳಿಯ ಕ್ಷೇತ್ರ ಕರಸೇವೆ, 50 ಸಾ. ರೂ. ದೇಣಿಗೆ ಘೋಷಣೆ

ಬಂಟ್ವಾಳ: ಸಾಮಾಜಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದಾಗ ಭಗವಂತನ ಕೃಪಾಶೀರ್ವಾದ ಪಡೆಯಲು ಸಾಧ್ಯ ಎಂದು ವಿಶ್ವ ಗಾಣಿಗರ ಚಾವಡಿ (ರಿ.) ಟ್ರಸ್ಟ್ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ ತಿಳಿಸಿದರು.

ಭಾನುವಾರ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದ ವಿಜಿಸಿ(ರಿ.) ಟ್ರಸ್ಟ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಿಸಿ ಟ್ರಸ್ಟ್ ಸಮಾಜದಲ್ಲಿ ಕಾಮಧೇನುವಿನ ರೀತಿ ಕಾರ್ಯಾಚರಿಸುತ್ತಿದೆ. ಆರೋಗ್ಯ ಸಂಜೀವಿನಿ, ಗೇನದ ತುಡರ್, ಭಕ್ತಿದ ತುಡರ್, ಚಾವಡಿದ ತುಡರ್ ಎಂಬ ಐದು ಸೇವಾ ಯೋಜನೆಗಳ ಜೊತೆಗೆ ರಕ್ತದಾನ, ನೇತ್ರದಾನ, ಶ್ರಮದಾನ ಮೂಲಕ ಸೇವಾ ಕೈಂಕರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಎಂ. ತಿಳಿಸಿದರು.

ಉಳ್ಳಾಲ ಉಳಿಯಕ್ಕೆ 50 ಸಾ.ರೂ. ದೇಣಿಗೆ:-
ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಉಳ್ಳಾಲ ಉಳಿಯ ಶ್ರೀ ಧರ್ಮರಸರ ಕ್ಷೇತ್ರದಲ್ಲಿ ವಿಶ್ವ ಗಾಣಿಗರ ಚಾವಡಿ (ರಿ.) ಟ್ರಸ್ಟ್ ಆಶ್ರಯದಲ್ಲಿ ಡಿ.17 ರಂದು ಕರಸೇವೆ ನಡೆಸಲು ನಿರ್ಧರಿಸಲಾಗಿದೆ ಅಲ್ಲದೆ ಟ್ರಸ್ಟ್ ವತಿಯಿಂದ 50 ಸಾ. ರೂ. ವನ್ನು  ನೀಡಲಾಗುವುದು, ಈ ಸೇವಾ ಕಾರ್ಯದಲ್ಲಿ ಗಾಣಿಗ ಸಮಾಜದ ಬಂಧುಗಳು ಭಾಗವಹಿಸುವಂತೆ ಅವರು ಕೋರಿದರು.

ದಶಮಾನೋತ್ಸವ ಪ್ರಯುಕ್ತ ಗೇನದ ತುಡರ್ ಯೋಜನೆಯಡಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಶಿಬಿರ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಫೆಬ್ರವರಿ ತಿಂಗಳಲ್ಲಿ ತಂಡದ ವಾರ್ಷಿಕ ಕ್ರೀಡಾಕೂಟ ನಡೆಸಲು  ತೀರ್ಮಾನಿಸಲಾಯಿತು. ಕೋಶಾಧಿಕಾರಿ ಹೇಮಲತಾ ಮೆಂಡನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಇದೇ ವೇಳೆ  ಟ್ರಸ್ಟ್ ಸದಸ್ಯರಿಗೆ ಉಳಿಯ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಬ್ರಹ್ಮಕಲಶೋತ್ಸವ ಆಮಂತ್ರಣ ವಿತರಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಅಜಿತ್ ಕುಮಾರ್ ಶೆಟ್ಟಿ ಸೋಮೇಶ್ವರ, ರಾಮ್ ದಾಸ್ ಸೋಮೇಶ್ವರ, ಗಣೇಶ್ ಕಣೀರ್ ತೋಟ, ಶೇಖರ್ ಸೋಮೇಶ್ವರ, ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ಡಿ. ಶಂಭೂರು, ಕಾರ್ಯದರ್ಶಿ ಸಂದೀಪ್ ಎಸ್ ಮೆಂಡನ್, ಅನಂತ ವಿಜಯ ಕೆ ತುಂಬೆ, ರಕ್ಷಿತ್ ಉಳ್ಳಾಲ, ಪವನ್ ದೊಂಡೋಲೆ, ದೀಕ್ಷಿತ್ ಮಂಜೇಶ್ವರ, ಲತೀಶ್ ಕುಂಪಲ, ಸುಶ್ಮಿತಾ ಸುನೀಲ್ ಉಪ್ಪಿನಂಗಡಿ, ವಿನಯ ಅನಂತ ವಿಜಯ, ಭವ್ಯ ಮಂಜೇಶ್ವರ, ವನಿತಾ ಕರಿಂಗಾನ, ಸುಮಿತ್ರಾ ನೂಯಿ, ಹೇಮಾಂಬಿಕಾ ಎಸ್ ಮೆಂಡನ್, ವೀಕ್ಷಿತಾ ನರೇಶ್ ಬಾರಾಡಿ, ಮಿಥುನ್ ಸುವರ್ಣ ಕುಂಪಲ, ಹರಿಶ್ಚಂದ್ರ ಶಕ್ತಿನಗರ, ಕಿಶೋರ್ ನರಿಕೊಂಬು, ಮಾಯಾಕ್ಷಿ ಲತೀಶ್ ಕುಂಪಲ, ಶ್ರುತಿ ವಿಕಾಸ್ ತಲಪಾಡಿ, ಚಿತ್ರಾಕ್ಷಿ ಕೆಲಿಂಜ, ಅಕ್ಷಿತಾ ಮಿಥುನ್ ಕುಂಪಲ, ದೇವರಾಜ್ ಎಡಪದವು, ಯುವರಾಜ್ ಬೋಳಂಗಡಿ, ಉಷಾ ಯುವರಾಜ್, ಶ್ವೇತಾ ಎಸ್ ಬ್ರಹ್ಮರಕೂಟ್ಲು, ರಾಜೀವಿ ದೇವಂದಬೆಟ್ಟು, ಶರ್ಮಿಳಾ ಅಳಪೆ, ದೀಕ್ಷಿತಾ ಕುರ್ನಾಡು, ದೀಪಿಕಾ ಮಂಜೇಶ್ವರ, ಗೌತಮಿ ಮಂಜೇಶ್ವರ, ಲೋಹಿತ್ ಪೆರಾಜೆ, ಶೈಲೇಶ್ ಮಾಣಿ, ಸುಕೇಶ್ ಮಾಣಿ, ಪುರುಷೋತ್ತಮ ಮಾಣಿ, ಜಯಲಕ್ಷ್ಮೀ, ಮನ್ವಿತಾ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter