ಬೆಂಜನಪದವು: ಹಿಂ ಜಾ ವೇ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ
ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಶ್ರೀರಾಮ ಘಟಕ ಶ್ರೀರಾಮನಗರ ಬೆಂಜನಪದವು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮವು ಶನಿವಾರ ಸಂಜೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದ ಮೈದಾನದಲ್ಲಿ ನಡೆಯಿತು.
ಈ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬಿ, ವಹಿಸಿದ್ದರು.
ಹೊಳ್ಳರಬೈಲು ಶ್ರಾವ್ಯ, ಗೋಕುಲ ಗೋ ಮಂದಿರದ ಸ್ಥಾಪಕ ನಾರಾಯಣ ಹೊಳ್ಳ ನೆತ್ತಕೆರೆ ಗುತ್ತು, ಮಂಗಳೂರು ವಿ.ಹಿಂ.ಪ.ನ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಹಿ.ಜಾ.ವೇ.ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪ್ರಮುಖರಾದ ವಿಜಯ ಕೆ., ಉಷಾ ಮನೋಜ್ ಶರ್ಮಾ, ಹರೀಶ್ ತಲೆಂಬಿಲ, ಸಂತೋಷ್ ಪೊಳಲಿ, ಬೀರಣ್ಣ ಆತಾರ್, ರೂಪೇಶ್ ಕುಮಾರ್ ಕೂರಿಯಾಳ, ಜಗದೀಶ್ ನೆತ್ತರಕೆರೆ, ಸುರೇಶ್ ನಡುಬೈಲ್, ದಾಮೋದರ ತುಂಗ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ನಾರಾಯಣ ಹೊಳ್ಳ ನೆತ್ತಕೆರೆ ಗುತ್ತು, ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು, ಹಾಗೆಯೇ ಬೆಂಜನಪದವು ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ವಿಜಯ ಕೆ. ,ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬಿ, ಧರ್ಮದರ್ಶಿ ಅವರನ್ನು ಗೌರವಿಸಲಾಯಿತು.
ಸಂತೋಷ್ ಕುಲಾಲ್ ನೆತ್ತರಕೆರೆ ಮತ್ತು ಸುರೇಶ ಎಸ್ .ನಾವೂರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಹಾಗೂ ತುಳು ಪೌರಾಣಿಕ ನಾಟಕ ನಡೆಯಿತು.