ಶ್ರೀ ಕ್ಷೇತ್ರ ಪೊಳಲಿಗೆ ಮಾಜಿ ಮಂತ್ರಿ ಪಿಜಿಆರ್ ಸಿಂದ್ಯಾ ಭೇಟಿ
ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ನ.14ರಂದು ಸೋಮವಾರ ಕರ್ನಾಟಕ ಸರಕಾರದ ಮಾಜಿ ಮಂತ್ರಿ ಹಾಗೂ ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯಸ್ಥ ಪಿಜಿಆರ್ ಸಿಂದ್ಯಾ ಹಾಗೂ ಹಿರಿಯ ನಾಯಕರಲ್ಲೊಬ್ಬರಾದ ಚಲ್ಲಯ್ಯ ಎಮ್.ಎ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವ ಭಟ್ ಪ್ರಸಾದ ನೀಡಿದರು. ಪ್ರಥಮ ಭಾರಿಗೆ ಆಗಮಿಸಿದ ಅವರು ಸುದ್ದಿ9 ಮಾಧ್ಯಮದೊಂದಿಗೆ ಮಾತನಾಡಿ ಕ್ಷೇತ್ರಕ್ಕೆ ಮೊದಲ ಬಾರಿ ಬಂದಿರುವುದರಿಂದ ತಾಯಿಯ ದರ್ಶನ ಪಡೆದು, ಕ್ಷೇತ್ರವನ್ನು ನೋಡಿ ಸ್ತಂಬಿಬೂತರಾದರೆಂದೂ, ಕ್ಷೇತ್ರದಲ್ಲಿ ಆಡಳಿತ ಮಂಡಳಿ, ಸ್ಥಳೀಯರು ಹಾಗೂ ಭಕ್ತಾದಿಗಳು ಸೇರಿ ದೇವಸ್ಥಾನವನ್ನು ಸ್ವಚ್ಚವಾಗಿಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೇ ರಾಜರಾಜೇಶ್ವರಿ ತಾಯಿ ಅವರನ್ನು ಇಂದು ಸನ್ನಿಧಿಗೆ ಕರೆಸಿಕೊಂಡಳೆಂದು ಧನ್ಯತಾಭಾವದಿಂದ ನುಡಿದರು.