ವಾಮಂಜೂರಿನಲ್ಲಿ ವೈಟ್‌ಗ್ರೋ ಅಣಬೆ ಉತ್ಪಾದನಾ ಘಟಕ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
ಕೈಕಂಬ : ವಾಮಂಜೂರಿನ ಆಶ್ರಯನಗರದ ಜನರಿಗೆ ಮಾನಸಿಕ ಹಿಂಸೆ ನೀಡಿ ನಿತ್ಯವೂ ಕೊಲ್ಲುತ್ತಿರುವ `ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ’ ಅಣಬೆ ಫ್ಯಾಕ್ಟರಿ ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊAಡಿರುವ ಫ್ಯಾಕ್ಟರಿ ಮಾಲಕರು ಈಗ, ಬಿಜೆಪಿಯ ಕೆಲವು ಎಚ್ಚರಿಕೆ ಮಾತು ಆಲಿಸಬೇಕು. ಇಲ್ಲಿನವರು ಈವರೆಗೆ ಪಕ್ಷಾತೀತ ಹೋರಾಟ ನಡೆಸಿದ್ದಾರೆ. ಬಂಧಿಸುವ, ಪೊಲೀಸ್ ಕೇಸ್ ಹಾಕುವ ಗೊಡ್ಡು ಬೆದರಿಕೆಗಳಿಗೆ ಮಣಿಯುವುದಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪಕ್ಷ ಉಗ್ರ ಹೋರಾಟಕ್ಕೂ ಸಿದ್ಧವಿದೆ.

ಅಂತಹ ಸಂದರ್ಭಗಳಲ್ಲಿ ನಡೆಯಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಆಡಳಿತ ನೇರ ಹೊಣೆಯಾಗುತ್ತದೆ. ಉಗ್ರ ಹೋರಾಟ ನಡೆಸಲಿ ಎಂದು ಕಾಂಗ್ರೆಸ್ ಇಚ್ಚಿಸಿದಲ್ಲಿ, ಬಿಜೆಪಿ ಡಬಲ್ ಆಸಕ್ತಿ ಹೊಂದಿದೆ. ಮುಂದಿನ ದಿನಗಳಲ್ಲಿ ಎನ್‌ಎಚ್(೧೬೯) ಬಂದ್ ಪ್ರತಿಭಟನೆ ನಡೆಸಲಿದ್ದೇವೆ ಮತ್ತು ಫ್ಯಾಕ್ಟರಿಗೆ ಬೀಗ ಜಡಿದೇ ಪಕ್ಷ ವಿರಮಿಸಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಕಡಕ್ ಎಚ್ಚರಿಕೆ ನೀಡಿದರು.
ವಾಮಂಜೂರಿನಲ್ಲಿ ನ. ೧೧ರಂದು ವೈಟ್‌ಗ್ರೋ ಅಣಬೆ ಉತ್ಪಾದನಾ ಘಟಕದ ವಿರುದ್ಧ ಬಿಜೆಪಿ ಮಂಗಳೂರು ಉತ್ತರ ಮಂಡಲ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ಬಂದ್ ಆಗಿದ್ದ ಅಣಬೆ ಫ್ಯಾಕ್ಟರಿ, ಕಾಂಗ್ರೆಸ್ ಸರ್ಕಾರದ ಕೃಪಾಶಯದಲ್ಲಿ ಮತ್ತೆ ತೆರೆದುಕೊಂಡಿದೆ. ಫ್ಯಾಕ್ಟರಿ ದುರ್ವಾಸನೆಯಿಂದ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರ ಸಹಿತ ಪರಿಸರವಾಸಿಗಳು ಹಲವು ಕಾಯಿಲೆಗಳಿಗೆ ತುತ್ತಾಗಿದ್ದಾರೆ.
ಕೋಟ್ಯಂತರ ರೂ ಬಂಡವಾಳ ಹೂಡಿ ಆರಂಭಿಸಿರುವ ಅಣಬೆ ಫ್ಯಾಕ್ಟರಿ ಉಳಿಸುವ ನಿಟ್ಟಿನಲ್ಲಿ ಮಾಲಕ ಜೆ. ಆರ್. ಲೋಬೊ ಅವರು ಕಾಂಗ್ರೆಸ್ ಸರ್ಕಾರದ ಬೆಂಬಲ ಪಡೆದು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಫ್ಯಾಕ್ಟರಿಯಿಂದ ದುರ್ವಾಸನೆ ಬರುತ್ತಿಲ್ಲ ಎಂದು ಲೋಬೊ ಅವರಿಗೆ ಬೆಂಬಲ ನೀಡುವವರು, ಆಶ್ರಯನಗರದಲ್ಲಿ ಮನೆ ಮಾರಾಟ ಮಾಡಲಿಚ್ಚಿಸಿರುವ ಮಂದಿಯಿAದ ಮನೆ ಖರೀದಿಸಿ ವಾಸಿಸುವ ಪ್ರಯತ್ನ ಮಾಡಲಿ ಎಂದು ಸವಾಲೆಸೆದರು.
ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ಮಾತನಾಡಿ, ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟದಲ್ಲಿ ರಾಜಕೀಯ ಎಳೆದು ತರಬಾರದೆಂಬ ಕಾರಣಕ್ಕಾಗಿ ಈವರೆಗೆ ಪಕ್ಷಾತೀತ ಹೋರಾಟ ನಡೆಸಿದ್ದೇವೆ. ಸರ್ಕಾರ ಜಗ್ಗದಿದ್ದರೆ ಮುಂದೆ ಫ್ಯಾಕ್ಟರಿ ಬಂದ್ ಆಗುವವರೆಗೆ ಪಕ್ಷವೇ ಎದುರು ನಿಂತು ಉಗ್ರ ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರದ ಬೆಂಬಲವಿರುವ ಫ್ಯಾಕ್ಟರಿಗೆ ಏನೂ ಆಗದು ಎಂಬ ಹುಂಬತನ ಬಿಟ್ಟು ಅವರು(ಲೋಬೊ) ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದರು.
ಮAಡಲದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ ಮಾತನಾಡಿ, ಇದು ಜನಪರ ಸರ್ಕಾರವಲ್ಲ. ಫ್ಯಾಕ್ಟರಿ ಬಂದ್ ಮಾಡಲು ಹೋರಾಟ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಯೊಬ್ಬ ಬೆದರಿಕೆಯೊಡ್ಡಿದ್ದಾರೆ. ನಿಮಗೆ ಧೈರ್ಯವಿದ್ದರೆ ಅಥವಾ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಮೊದಲಾಗಿ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ತಡೆಗೆ ಕ್ರಮ ಕೈಗೊಳ್ಳಿ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಅವರು ಮಾತನಾಡಿ, ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯಿಂದ ಜೆ. ಆರ್. ಲೋಬೊ ಅವರು ಹಣ ಗಳಿಸಬಹುದು. ಆದರೆ ಅಲ್ಲಿ ಅವರು ಹೆಣಗಳ ಮೇಲೆ ಹಣ ಗಳಿಸುತ್ತಿದ್ದಾರೆ ಎಂಬುದು ನೆನಪಿರಲಿ. ಕೇಸ್ ಜಡಿಯಲಿ, ಬಂಧಿಸಲಿ ಫ್ಯಾಕ್ಟರಿ ಬಂದ್ ಆಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.
ಅಣಬೆ ಫ್ಯಾಕ್ಟರಿ ಬಂದ್ ಪ್ರತಿಭಟನೆಯ ಮುಂಚೂಣಿಯಲ್ಲಿರುವ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಪ್ರಸ್ತಾವಿಕ ಮಾತನ್ನಾಡಿದರು. ಪ್ರತಿಭಟನೆಯಲ್ಲಿ ಉಪಮೇಯರ್ ಸುನಿತಾ ತಣ್ಣೀರುಬಾವಿ, ಉತ್ತರ ಮಂಡಲ ಬಿಜೆಪಿಯ ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಉತ್ತರ ಮಂಡಲದ ಯುವ ಮೋರ್ಚಾದ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ, ಮನಪಾ ಕಾರ್ಪೊರೇಟರ್‌ಗಳಾದ ಸಂಗೀತಾ ಆರ್. ನಾಯಕ್, ಕಿರಣ್ ಕುಮಾರ್ ಕೋಡಿಕಲ್, ವರುಣ್ ಚೌಟ, ನಯನಾ ಕೋಟ್ಯಾನ್, ಶೋಭಾ ಎಸ್, ಲಕ್ಷಿö್ಮÃ ಎಸ್. ದೇವಾಡಿಗ, ರಂಜಿನಿ ಕೋಟ್ಯಾನ್, ಸುಮಂಗಲಾ ರಾವ್, ಸರಿತಾ ಮತ್ತು ಗಾಯತ್ರಿ, ಮಾಜಿ ಮೇಯರ್ ಜಯಾನಂದ ಅಂಚನ್, ಬಿಜೆಪಿ ಮುಖಂಡರಾದ ಲಕ್ಷö್ಮಣ್ ಶೆಟ್ಟಿಗಾರ, ಓಂ ಪ್ರಕಾಶ್ ಶೆಟ್ಟಿ, ಹರಿಪ್ರಸಾದ್ ಆಳ್ವ, ಶ್ರೀನಿವಾಸ ಸುವರ್ಣ ಮುಲ್ಲೂರು, ಅನಿಲ್ ರೈ ವಾಮಂಜೂರು, ಪ್ರಸಾದ್ ಎಡಪದವು, ಸುಕುಮಾರ ದೇವಾಡಿಗ, ರಾಜೇಶ್ ಸುವರ್ಣ ಗುರುಪುರ, ಶ್ರೀಕರ ಶೆಟ್ಟಿ ಗುರುಪುರ, ಅಶೋಕ್‌ರಾಜ್, ಶೇಖರ ಪೂಜಾರಿ, ಬಾಲಕೃಷ್ಣ ಅಂಚನ್, ಗಣೇಶ್ ಪಾಕಜೆ, ಭಾಸ್ಕರ ಕೋಟ್ಯಾನ್ ಹಾಗೂ ಪಕ್ಷ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಫ್ಯಾಕ್ಟರಿ ಸಂತ್ರಸ್ತರು, ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು. ಪ್ರತಿಭಟನೆಯ ವೇಳೆ ಭ್ರಷ್ಟ ಸರ್ಕಾರ, ಅಧಿಕಾರಿಗಳು ಹಾಗೂ ಫ್ಯಾಕ್ಟರಿ ವಿರುದ್ಧ ಘೋಷಣೆ ಕೂಗಲಾಯಿತು. ಬಿಜೆಪಿ ಮುಖಂಡ ಉಮೇಶ್ ಕೋಟ್ಯಾನ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.