ನಾವು ಜೀವನದಲ್ಲಿ ಭಗವಂತನನ್ನು ಅನುಸರಿಸಿದರೆ ನಮ್ಮ ಜೀವನ ಸಾರ್ಥಕ: ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆದ ಹರಿಕಥಾ ಸಪ್ತಾಹದಲ್ಲಿ ನ.10 ಶುಕ್ರವಾರದಂದು ಕಲಾವಾರಿಧಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ “ಸತೀ ಸಾವಿತ್ರಿ” ಎಂಬ ಕಥಾನಕದ ಹರಿಕಥೆ ನಡೆಯಿತು.

ಹರಿಕಥಾ ವಾಚನದ ಸಂದರ್ಭದಲ್ಲಿ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ, ಆಶ್ರಮದ ಮಕ್ಕಳು, ಇನ್ನಿತರರು ಉಪಸ್ಥಿತರಿದ್ದು ಕಥಾ ಶ್ರವಣ ಮಾಡಿದರು.

ಏಳು ದಿನಗಳ ಹರಿಕಥಾ ಸಪ್ತಾಹವು ನ.10ರಂದು ಪೂರ್ಣಗೊಂಡಿತು, ಪೂರ್ಣವಾದ ಮೇಲೆ ಸ್ವಾಮೀಜಿ ಆಶೀರ್ವಚನದಲ್ಲಿ ಭಗವದ್ಗೀತೆಯ 18ನೇ ಅಧ್ಯಾಯದ 66ನೇ ಶ್ಲೋಕ “ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಾಂ ವ್ರಜ ಅಹಂ ತ್ವಾಂ ಸರ್ವ-ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ” ವಿವರಿಸುತ್ತಾ ಜೀವನದಲ್ಲಿ ಭಗವಂತನನ್ನು ಅನುಸರಿಸಿದರೆ ನಮ್ಮ ಜೀವನ ಸಾರ್ಥಕವಾಗುವುದು ಎಂದರು.

2024 ಜನವರಿ 22ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ 108 ಕೋಟಿ ರಾಮ ನಾಮ ಜಪವನ್ನು ಸಂಪೂರ್ಣಗೊಳಿಸಲು 48 ದಿನಗಳ ಮುಂಚಿತವಾಗಿ ಈ ಕಾರ್ಯವನ್ನು ಪ್ರಾರಂಭಗೊಳಿಸಲು ಪೂರ್ವಾಭಾವಿ ಸಭೆಯನ್ನು ನ.19ರಂದು ಕರೆದಿದ್ದು ಎಲ್ಲರೂ ಸಬೆಯಲ್ಲಿ ಭಾಗವಹಿಸಬೇಕೆಂದು ಸ್ವಾಮೀಜಿಯವರು ತಮ್ಮ ಮಾತುಗಳಲ್ಲಿ ನುಡಿದರು.

