ರಾಷ್ಟ್ರ ಮಟ್ಟದ ವಿಜ್ಞಾನ ಮೇಳದಲ್ಲಿ ದ್ವಿತೀಯ
ಬಂಟ್ವಾಳ: ಪಂಜಾಬಿನ ಅಮೃತಸರದಲ್ಲಿ ನಡೆದ ಸುಮಾರು ಹತ್ತು ಕ್ಷೇತ್ರಗಳನ್ನು ಒಳಗೊಂಡ ರಾಷ್ಟ್ರ ಮಟ್ಟದ ವಿಜ್ಞಾನ ಮೇಳದಲ್ಲಿ ಮಳೆ ನೀರು ಕೊಯ್ಲು ಆಧಾರಿತ ಪ್ರತಿರೂಪ ಎಂಬ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 7ನೆ ತರಗತಿಯ ವಿದ್ಯಾರ್ಥಿನಿ ಅಮೂಲ್ಯ ಡಿ.ಎಸ್, ದ್ವಿತೀಯ ಸ್ಥಾನ ಪಡೆದು ಶ್ರೀರಾಮ ಶಾಲೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುತ್ತಾರೆ.

ಇವರಿಗೆ ವಿದ್ಯಾಕೇಂದ್ರದ ವತಿಯಿಂದ ಅದ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಅದ್ಯಾಪಕೇತರ ವೃಂದದವರು ಅಭಿನಂದಿಸಿದರು.
