ಪೊಳಲಿ: ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಅ.೧೯ ಗುರುವಾರ ಲಲಿತಾ ಪಂಚಮಿಯ ವಿಶೇಷ ದಿನದಂದು ರಾತ್ರಿ ೮:೦೦ಗಂಟೆಯಿಂದ ೧೦:೦೦ರ ವರೆಗೆ ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮ ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಸಂಜೆ ಗಂಟೆ ೬:೦೦ರಿಂದ ೮:೦೦ರ ತನಕ ಸುಗಮ ಸಂಗೀತ, ದಾಸ ಕೀರ್ತನೆ, ಭಕ್ತಿ ಗಾಯನ, ಹಾಗೂ ದೇವರನಾಮಗಳು,ರಾತ್ರಿ ೮:೦೦ಗಂಟೆಯಿಂದ ೧೦:೦೦ರ ತನಕ ವಿದ್ವಾನ್ ಶ್ರೀ ಗಣರಾಜ್ ಭಟ್ ಬಂಟ್ವಾಳ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *