ಬಂಟ್ವಾಳ: ಅ. 19 ರಿಂದ 25 ರ ವರೆಗೆ ಶ್ರೀ ಶಾರದಾ ಮಹೋತ್ಸವ
ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ದೇವಳದ ವಠಾರದಲ್ಲಿ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಶಾರದೋತ್ಸವ ಸಮಿತಿ ಬಂಟ್ವಾಳ ವತಿಯಿಂದ ಐದು ದಿನಗಳ ಕಾಲ ಆರಾಧಿಸಲ್ಪಡುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಅ. 19 ರಿಂದ 25 ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅ. 19 ರಂದು ರಾತ್ರಿ 10.00 ಗಂಟೆಗೆ ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದ್ದು,
20 ರಿಂದ 24 ರ ವರೆಗೆ ವಿಶೇಷ ಆಹ್ವಾನಿತ ಭಜನಾ ಕಲಾವಿದರಿಂದ ಹಾಗೂ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಲಿರುವುದು.
ಅ.24 ರಂದು ಶ್ರೀ ದೇವಿಯನ್ನು ವಿಶೇಷ ಶ್ರೀ ಮಹಾಕಾಳಿ ರೂಪದಲ್ಲಿ ಅಲಂಕಾರ ಮಾಡಲಾಗುವುದು,ಅ.25 ರಂದು ರಾತ್ರಿ 10.00 ಕ್ಕೆ ಶಾರದಾ ಮಾತೆಯ ವೈಭವದ ಶೋಭಯಾತ್ರೆಯು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಶೇಷ ಸೂಚನೆ:-ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ
ಅ.25 ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯಂದು ಬಂಟ್ವಾಳ ರಥಬೀದಿಯಲ್ಲಿರುವ ಅಂಚೆ ಕಚೇರಿಯಿಂದ ಭಾಮಿ ಜಂಕ್ಷನ್ ನ ಪೂರ್ಣಿಮಾ ಸ್ಟೋರ್ ಹಾಗೂ ಬೈಪಾಸ್ ರಸ್ತೆಯ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನವನ್ನು ನಿಲುಗಡೆಯನ್ನು ನಿಷೇಧಿಸಲಾಗಿದೆ,
ಅದೇ ರೀತಿ ಅಂದು ಆಗಮಿಸುವ ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ಈ ಕೆಳಗಿನಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
* ಪಾಣೆಮಂಗಳೂರು, ಕಲ್ಲಡ್ಕ, ಮಂಗಳೂರು ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದ್ವಿಚಕ್ರ ವಾಹನ ಸವಾರರು ಶ್ರೀ ದೇವಳದ ಸಮೀಪ ಇರುವ ಎಸ್ ವಿ ಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲುಗಡೆಗೊಳಿಸುವಂತೆ ಕೋರಲಾಗಿದೆ.
* ಮೂಡುಬಿದಿರೆ, ಸಿದ್ಧಕಟ್ಟೆ, ಬೈಪಾಸ್ ಕಡೆಯಿಂದ ಬರುವ ವಾಹನಗಳು ಬಂಟ್ವಾಳ ಪೇಟೆಗೆ ಬರುವ ದಾರಿಯಲ್ಲಿ ಕೊಟ್ರಮನಗಂಡಿಯ ದೇವರ ಕಟ್ಟೆಯ ಬಸ್ ನಿಲ್ದಾಣದಲ್ಲಿ ನಿಲುಗಡಗೊಳಿಸುವಂತೆ ಕೋರಲಾಗಿದೆ.
* ಪುಂಜಾಲ್ ಕಟ್ಟೆ, ಗುರುವಾಯನಕೆರೆ ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಸರಸ್ವತಿ ನರ್ಸಿಂಗ್ ಹೋಮ್ ಇದರ ಮುಂದೆ ಇರುವ ವಿಶಾಲ ಮೈದಾನದಲ್ಲಿ ನಿಲುಗಡೆಗೊಳಿಸುವಂತೆ ಸೂಚಿಸಲಾಗಿದೆ.
ದೇವಳದ ವತಿಯಿಂದ ಸೂಚಿಸಲಾದ ಸ್ಥಳದಲ್ಲಿಯೇ ತಮ್ಮ ವಾಹನವನ್ನು ನಿಲುಗಡೆಗೊಳಿಸಿ ಸಹಕರಿಸುವಂತೆ ಕೋರಲಾಗಿದೆ.