ತುಂಬೆ: ಮಲಯಾಳಿ ಬಿಲ್ಲವ ಸಂಘದ ಮಹಾಸಭೆ
ಬಂಟ್ವಾಳ: ಮಲಯಾಳಿ ಬಿಲ್ಲವ ಸಂಘ ನೆತ್ರಕೆರೆ,ತುಂಬೆ ಇದರ ವಾರ್ಷಿಕ ಮಹಾಸಭೆಯು ತುಂಬೆ ರಾಮಲ್ ಕಟ್ಟೆ,ಕಲ್ಲಗುಡ್ಡೆಯ ಗ್ರಾಮ ಸಂಘದ ಮನೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ರವರು ವಹಿಸಿದ್ದರು.ವೇದಿಕೆಯಲ್ಲಿ ಆಚಾರ ಪಟ್ಟವರಾದ ಬೀರಣ್ಣ ಆಯತಾರ್,ಗುರಿಕಾರ ಚಂದ್ರಶೇಖರ್,ಕ್ಷೇತ್ರದ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್,ಮಹಿಳಾ ಘಟಕದ ಅಧ್ಯಕ್ಷ ಸರೋಜಿನಿ,ಜನಾರ್ದನ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ಗಣೇಶ್ ಕೆ.ಪರಾರಿ ವರದಿ ವಾಚಿಸಿದರು.ಸುಕುಮಾರ್ ಜ್ಯೋತಿಗುಡ್ಡೆ ವಂದಿಸಿದರು.ಸಭೆಯಲ್ಲಿ ನೂತನ ಸಮಿತಿ ಹಾಗೂ ಮಹಿಳಾ ಸಮಿತಿಯನ್ನು ರಚಿಸಲಾಯಿತು.