ಮಳಲಿ ದೇವರಗುಡ್ಡೆಯಲ್ಲಿ ಪುರಾತನ ದೇವಾಲಯ ಒಂದಿತ್ತು ಎನ್ನುವುದಕ್ಕೆ ಪುರಾವೆ! ಪುನರ್ ನಿರ್ಮಾಣದ ಶ್ರಮದಾನದಂದು ಸಿಕ್ಕಿದ ಅವಶೇಷ,ಕುತೂಹಲದಿಂದ ನೋಡಲು ಆಗಮಿಸುತ್ತಿರುವ ಜನರು
ಕೈಕಂಬ: ಗಂಜಿಮಠ ಸಮೀಪದ ಮಳಲಿ ದೇವರಗುಡ್ಡೆಯಲ್ಲಿ ಪುರಾತನ ನೂರಾರು ವರ್ಷಗಳ ಇತಿಹಾಸ ಇರುವ ದೇವಾಲಯ ಇತ್ತು ಎನ್ನುವುದಕ್ಕೆ ಇದೀಗ ಪುರಾವೆಗಳು ಪತ್ತೆಯಾಗಿವೆ.
ನಾಶವಾಗಿತ್ತು ಎಂದು ಹೇಳುತ್ತಿದ್ದ ಶ್ರೀ ಸೂರ್ಯನಾರಾಯಣ ದೇಗುಲದ ಸ್ಥಳವನ್ನು ಶ್ರಮಾದಾನದ ಮೂಲಕ ಸಮತಟ್ಟುಗೊಳಿಸುತ್ತಿದ್ದ ಸಂದರ್ಭದಲ್ಲಿ ಇಟ್ಟಿಗೆಗಳು,ಹಣತೆಗಳು,ಹೆಂಚುಗಳು,ಶಿಲಾ ಕಲ್ಲುಗಳು ಹಾಗೂ ಗರ್ಭಗುಡಿ ಇದ್ದಿರಬಹುದು ಎನ್ನಲಾದ ಜಾಗದಲ್ಲಿ ನಾಲ್ಕು ಚೌಕಾಕಾರದ ಬೃಹತ್ ಕಲ್ಲುಗಳು ಪತ್ತೆಯಾಗಿದೆ.ಇದು ಜನರ ಕುತೂಹಲಕ್ಕೆ ಕಾರಣವಾಗಿದೆ.
ಪುರಾವೆಗಳು ನೂರಾರು ವರ್ಷಗಳಷ್ಟು ಪುರಾತನ ಇರಬಹುದು ಎಂದು ಅಂದಾಜಿಸಲಾಗಿದೆ.ಸಾನಿಧ್ಯದ ಜಾಗದಲ್ಲಿ ಇನ್ನೂ ಅನೇಕ ಅವಶೇಷಗಳು ಪತ್ತೆಯಾಗಬಹುದು ಆದ್ದರಿಂದ ಬಹಳ ಎಚ್ಚರಿಕೆ ವಹಿಸಿ ಇನ್ನುಳಿದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ನಿರ್ಧರಿಸಲಾಗಿದೆ.
ದೊರೆತಿರುವ ವಸ್ತುಗಳು ಯಾವ ಕಾಲದ್ದು ಹಾಗೂ ಪತ್ತೆಯಾದ ಪರಿಕರಗಳು ನಾಶವಾದ ದೇವಾಲಯದ್ದೇ? ಎಂದು ತಜ್ಙರಿಂದ ಪರಿಶೀಲನೆ ಬಳಿಕ ಬಹಿರಂಗವಾಗಲಿದೆ.