ರಾಷ್ಟ್ರ ಮಟ್ಟದ ಸ್ಫರ್ಧೆಗೆ ಆಯ್ಕೆ
ಬಂಟ್ವಾಳ: ಬೆಂಗಳೂರು ಥಣಿಸಂದ್ರ ರಾಷ್ಟೋತ್ಥಾನ ವಿದ್ಯಾ ಕೇಂದ್ರದ ಈಜು ಕೊಳದಲ್ಲಿ ವಿದ್ಯಾ ಭಾರತಿ ಕರ್ನಾಟಕ ಆಯೋಜಿಸಿದ ರಾಜ್ಯ ಮಟ್ಟದ ಈಜು ಸ್ಪರ್ಧೆ ಗಳಲ್ಲಿ 14 ವರ್ಷದೊಳಗಿನ ಹುಡುಗಿಯರ 200 ಮೀ ಬಟರ್ ಫ್ಲೈ ಯಲ್ಲಿ ಪ್ರಥಮ,200 ಮೀ ವೈಯಕ್ತಿಕ ಮಿಡ್ಲೆ ಮತ್ತು 200 ಮೀಟರ್ ಬ್ಯಾಕ್ ಸ್ಟ್ರೋಕ್ ಗಳಲ್ಲಿ ತೃತೀಯ ಸ್ಥಾನ ಪಡೆದ ಕಲ್ಲಡ್ಕ ಶ್ರೀರಾಮ ಫ್ರೌಢಶಾಲೆ 8 ನೇ ತರಗತಿಯ ಅನರ್ಘ್ಯ .ಎ.ಆರ್.ರಾಷ್ಟ್ರ ಮಟ್ಟದ ಸ್ಫರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರು ಮಂಗಳೂರಿನ ರೇಷ್ಮೆ ಇಲಾಖೆಯ ನಿವೃತ್ತ ನಿರೀಕ್ಷಕ ಬಿ.ಕೆ.ನಾಯ್ಕ್ ರವರ ಶಿಷ್ಯೆಯಾಗಿದ್ದು,ಮಂಗಳೂರು ವಿ ವನ್ ಈಜು ತರಬೇತಿ ಕೇಂದ್ರದ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಮತ್ತು ಸ್ಯಾಂಜು ಇವರಿಂದ ತರಬೇತಿ ಪಡೆದಿರುತ್ತಾರೆ.