ಕರಿಯಂಗಳ ಗ್ರಾ. ಪಂ. ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ
ಕೈಕಂಬ: ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ವಠಾರದಲ್ಲಿ ಅ.೧ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಆಸರೆ ಸೇವಾ ಫೌಂಡೇಶನ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊಳಲಿ ಹಾಗೂ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾ ಲೋಕೇಶ್,ಉಪಾಧ್ಯಕ್ಷ ರಾಜು ಕೋಟ್ಯಾನ್,ಆಸರೆ ಸೇವಾ ಫೌಂಡೇಶನ್ ನ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ,ಗ್ರಾ.ಪಂ.ಸದಸ್ಯ ಲಕ್ಷ್ಮೀಶ ಶೆಟ್ಟಿ,ಆಸರೆ ಸೇವಾ ಫೌಂಡೇಶನ್ ನ ಸರ್ವ ಸದಸ್ಯರು,ಶಾಲಾ ಪುಟಾಣಿ ಮಕ್ಕಳು,ರಾಮಕೃಷ್ಣ ತಪೋವನದ ಮಕ್ಕಳು,ಆಶಾ ಕಾರ್ಯಕರ್ತೆಯರು ಪಂಚಾಯತ್ ಸಿಬ್ಬಂದಿಗಳು ಹಾಗೂ ಶಾಲಾ ಪ್ರಾಧ್ಯಾಪಕರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.