ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಬಂಟ್ವಾಳ: ಪುತ್ತೂರು ಡಾ. ಶಿವರಾಮ ಕಾರಂತ ಈಜುಕೊಳದಲ್ಲಿ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಅನರ್ಘ್ಯ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

೧೦೦ಮೀ. ಬ್ಯಾಕ್ ಸ್ಟ್ರೋಕ್,೨೦೦ಮೀ. ಬ್ಯಾಕ್ ಸ್ಟ್ರೋಕ್,೨೦೦ಮೀ. I.ಒ ಗಳಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ೮ನೇ ತರಗತಿಯ ಅನರ್ಘ್ಯ ಎ. ಆರ್. ಪ್ರಥಮ ಸ್ಥಾನ ಪಡೆದು ಒಟ್ಟು ೩ ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
