46 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ
ವಿಟ್ಲ: ಯುವಕ ಮಂಡಲ ವಿಟ್ಲ ಇದರ 46 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಉದ್ಘಾಟಣೆಯನ್ನು ಪ್ರಶಸ್ತಿ ವಿಜೇತ ಉದ್ಯಮಿ ಎ ಕೃಷ್ಣ ನೆರವೇರಿಸಿದರು.

ವಿಟ್ಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಕುಮಾರಿ,ಯುವಕ ಮಂಡಲದ ಅಧ್ಯಕ್ಷ ವಸಂತ ಶೆಟ್ಟಿ,ಗೌರವಾಧ್ಯಕ್ಷ ರಮೇಶ್ ಬಿ ಎಸ್, ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ, ಕೋಶಾಧಿಕಾರಿ ಗಂಗಾಧರ,ಲೋಕರಾಜ್,ಸುದರ್ಶನ ಪಡಿಯಾರ್,ಸುಧೀರ್ ಉಪಸ್ಥಿತರಿದ್ದರು.ಮಕ್ಕಳಿಗಾಗಿ ಆಯೋಜಿಸಿದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.