ವಿಟ್ಲ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನಾ ಸಮಾರಂಭ
ವಿಟ್ಲ:ಸರಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ) ವಿಟ್ಲ ಇಲ್ಲಿ ಮುತ್ತೂಟ್ ಫೈನಾನ್ಸ್ ನವರ ಉಪಕ್ರಮ ರೂ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ನೆರವೇರಿಸಿದರು.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ವಿಟ್ಲ ಸರ್ಕಾರಿ ಶಾಲೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಿಚಾರ ಸಂತಸ,ಇಂಥ ಸಂಸ್ಥೆಗೆ ಬೇಕಾದ ಭೌತಿಕ ವ್ಯವಸ್ಥೆ ಮಾಡಲು ತಾನು ಸಹಕರಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮುತ್ತೂಟ್ ಫೈನಾನ್ಸ್ ನ ರೀಜನಲ್ ಮೇನೇಜರ್ ಉದಯ್ ಶ್ಯಾಮ್ ಖಂಡಿಗೆ, ಎಡ್ಮಿನಿಸ್ಟ್ರೇಟಿವ್ ಮೇನೇಜರ್ ರಾಹುಲ್ ರಾಘವನ್,ಪುತ್ತೂರು ಕ್ಲಸ್ಟರ್ ಮೇನೇಜರ್ ಸಂದೇಶ್ ಶೆಣೈ,ವಿಟ್ಲ ಬ್ರಾಂಚ್ ಮೇನೇಜರ್ ಪ್ರತಿಮಾ,ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ,ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ,ಇ ಸಿ ಒ ಸುಧಾ,ಸಿ ಆರ್ ಪಿ ಬಿಂದು,ಪ್ರಾ ಶಾ ಮುಖ್ಯ ಶಿಕ್ಷಕಿ ವಾರಿಜಾ ಕುಮಾರಿ ಇವರು ಭಾಗವಹಿಸಿದ್ದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಅನ್ನಪೂರ್ಣ ಸ್ವಾಗತಿಸಿ,ಶಿಕ್ಷಕಿ ಅಶ್ವಿನಿ ವಂದಿಸಿದರು.ಶಿಕ್ಷಕ ಸದಾಶಿವ ನಾಯಕ್ ನಿರೂಪಿಸಿದರು.