ಬಂಟ್ವಾಳ:ಪಾಣೆಮಂಗಳೂರು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜರುಗಿದ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ.ಶ್ರೀ.ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಇವರು ಆಶೀರ್ವಚನ ನೀಡುತ್ತಾ. ಇಡೀ ವಿಶ್ವದಲ್ಲಿ ಶಿವನ ಅರಾಧಕರಿದ್ದು ಇಡೀ ವಿಶ್ವವೇ ಶಿವಮಯವಾಗಿದೆ ಇಂತಹ ದೇವಾಲಯಗಳು ಸಾಂಸ್ಕೃತಿಕ ತಾಣವಾಗುವುದರ ಜತೆಗೆ ಸಾಮಾಜಿಕ ನೆಮ್ಮದಿಯ ತಾಣವಾಗಬೇಕು. ದೇವಾಲಯಗಳಿಂದ ಸನಾತನ ಸಂಸ್ಕೃತಿಯ ಪುನರುತ್ಥಾನವಾಗಿದೆ.
26-nara
ಸೇವೆ ಹಾಗೂ ತ್ಯಾಗ ಹೃದಯ ಅಂತರಾಳದಿಂದ ನಡೆಯಬೇಕು. ಆತ್ಮವೆಂಬುದು ಮಾತೃ ಸತ್ಯವಾಗಿರುತ್ತದೆ. ಮಾನವ ಮಾಧವನಾಗಲು ಭಗವಂತನನ್ನು ಭಕ್ತಿಯಿಂದ ಪೂಜಿಸಬೇಕು ಆಗಲೇ ಮೋಕ್ಷವನ್ನು ಪಡೆಯಬಹುದು ಎಂದು ಅಶೀರ್ವಚನ ನೀಡುತ್ತಾ ಭಕ್ತರನ್ನು ಅಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದರು.

ನರಹರಿ ಕ್ಷೇತ್ರವನ್ನು ಭೂಲೋಕದ ಕೈಲಾಸ ಎಂದು ಬಣ್ಣಿಸಿದ ಅವರು ಈ ಕ್ಷೇತ್ರವನ್ನು ಈ ಮಟ್ಟಕ್ಕೆ ಅಭಿವೃದ್ಥಿಗೊಳಿಸಿದ ಡಾ.ಕಲ್ಲಾಜೆ ಭಾಸ್ಕರ ಮಾರ್ಲ ನೇತೃತ್ವದ ಶ್ರಮ ನಿಜಕ್ಕೂ ಅಭಿನಂದನೀಯ ಎಂದರು. ಇನ್ನು ಮಂದೆಯೂ ಈ ಕ್ಷೇತ್ರ ಹೆಚ್ಚೆಚ್ಚು ಅಭಿವೃದ್ಧಿಯನ್ನು ಕಾಣಲಿ ಎಂದು ಧಾರ್ಮಿಕ ಸಮಾರಂಭದಲ್ಲಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೋಕ್ತೆಸರರಾದ ಡಾ.ಪ್ರಶಾಂತ್ ಮಾರ್ಲರವರು ವಹಿಸಿ ಆತಿಥಿಗಳನ್ನು ಸ್ವಾಗತಿಸಿದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿಯವರು ಪ್ರಸ್ತಾವಿಕವಾಗಿ ಶ್ರೀ ಕ್ಷೇತ್ರ ನಡೆದು ಬಂದ ದಾರಿಯನ್ನು ತಿಳಿಸಿದರು.
ಪ್ರಧಾನ ಆತಿಥಿಯಾಗಿ ಮಂಗಳೂರು ಲೇಡಿ ಹಿಲ್ಲ್ ಸಾಯಿಬಾಬಾ ಮಂದಿರದ ಆಡಳಿತ ಮೋಕ್ತೆಸರರು ಹಾಗೂ ವಿ4 ಮಿಡಿಯಾದ ನಿರ್ದೇಶಕರಾದ ವಿಶ್ವಾಸ್ ಕುಮಾರ್ ದಾಸ್ ಮಾತನಾಡುತ್ತಾ ಶ್ರೀ ಕ್ಷೇತ್ರದ ಅಭಿವೃದ್ಥಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇನ್ನೊರ್ವ ಅತಿಥಿ ಮಂಗಳೂರು ನಗರ ಪಾಲಿಕೆಯ ಸದಸ್ಯರಾದ ಕೇಶವ ಮರೋಳಿ ಭಾಗವಹಿಸಿದರು.
ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ.ಆತ್ಮರಂಜನ್ ರೈ ಉಪಸ್ಥಿತರಿದ್ದು ಶ್ರೀನಿವಾಸ ಗುರುಜ್ಯೋತಿ ಕಾರ್ಯಕ್ರಮ ಸಂಯೋಚಿಸಿ ಯಂ.ಯನ್.ಕುಮಾರ್ ವಂದಿಸಿದರು ಬಳಿಕ ಪುತ್ತೂರು ರೋಹಿಣಿ ಉದಯ್ ಬಳಗದವರಿಂದ ನೃತ್ಯ ವೈಭವ ಬಳಿಕ ಬಲಿ ಉತ್ಸವ ಜರುಗಿತು.
ತೀರ್ಥ ಸ್ನಾನಾದಿ ಉತ್ಸವದ ಸಂಧರ್ಭದಲ್ಲಿ ಅತಿಥಿಗಳಾದ ಬೆಂಗಳೂರು ಉದ್ಯಮಿ ಸೌಂದರ್ಯ ರಮೇಶ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಆಶೀರ್ವದ ಪಡೆದರು.

By suddi9

Leave a Reply

Your email address will not be published. Required fields are marked *