ಯಕ್ಷರಂಗ ಪ್ರವೇಶಿಸಲಿದ್ದಾರೆ ಪಾಯಿಸನ್ ಸಿರಿದರೆ ಖ್ಯಾತಿಯ ಸುರೇಶ್ ಕುಲಾಲ್
ಬಂಟ್ವಾಳ:ಚಾಪರ್ಕ ತಂಡದ ಕಲಾವಿದ, ರಂಗಭೂಮಿ , ಕಿರುತೆರೆಯಲ್ಲಿ ನಟಿಸಿ, ತುಳು ತೆಲಿಕೆದಬೊಳ್ಳಿ ಸಿನಿಮಾದಲ್ಲಿ ಪಾಯಿಸನ್ ಸಿರಿದರೆ ಮುಖ್ಯ ಖಳನಾಯಕನ ಪಾತ್ರ ವಹಿಸಿರುವ ಸುರೇಶ್ ಕುಲಾಲ್ ಬಂಟ್ವಾಳ ಅವರು ಯಕ್ಷರಂಗಕ್ಕೆ ಪ್ರವೇಶಿಸಿ ಚೆಂಡೆಯ ನಾದಕ್ಕು ಧಿಗಿಣ ಹಾಕಲಿದ್ದಾರೆ.

ಕಟೀಲು ಮೇಳದ ಕಲಾವಿದ ಅಶ್ವಥ್ ಕುಲಾಲ್ ಮಂಜನಾಡಿಯವರ ನಿರ್ದೇಶನದಲ್ಲಿ ಜುಲೈ ೨೩ರಂದು ( ಭಾನುವಾರ) ಬಿ.ಸಿ.ರೋಡಿಗೆ ಸಮೀಪದಪೊಸಳ್ಳಿ ಕುಲಾಲ ಭವನದಲ್ಲಿ ನಡೆಯುವ ತುಳು ಯಕ್ಷಗಾನ “ಮಹಿಮೆದ ಬಾಲೆ ಸಿರಿಕೃಷ್ಣೆ” ಪ್ರಸಂಗದಲ್ಲಿ ವಿಶೇಷ ಪಾತ್ರದ ಮೂಲಕ ರಂಗ ಪ್ರವೇಶ ಮಾಡಲಿದ್ದಾರೆ. ನಾಟಕ ರಂಗದಲ್ಲಿ ಹಾಸ್ಯಪಾತ್ರದಲ್ಲಿ ಮೇಲುಗೈ ಸಾಧಿಸಿ ಕಳೆದ ೨೦ ವರ್ಷಗಳಿಂದ ಚಾಪರ್ಕದಲ್ಲಿಯೂ ಹಾಸ್ಯ ಕಲಾವಿದರಾಗಿ ಈಗ ಮುಖ್ಯ ಪಾತ್ರದಾರಿಯಾಗಿ ನಟಿಸುತ್ತಿರುವ ಸುರೇಶ್ ಕುಲಾಲ್ ತುಳು, ಕನ್ನಡ ಸಿನೆಮಾ ಮತ್ತು ಧಾರವಾಹಿಯಲ್ಲೂ ಸೈ ಎನಿಸಿಕೊಂಡ ಕಲಾವಿದ

ಬಿ.ಸಿ.ರೊಡಿನ ಬೋರುಗುಡ್ಡೆಯ ರಾಮ ಮೂಲ್ಯ ಮತ್ತು ಲೀಲಾ ದಂಪತಿಗಳ ಎರಡನೇಯ ಪುತ್ರ ಸುರೇಶ್ ಕುಲಾಲ್. ಈತ ಕಲಿತದ್ದು ೬ನೇ ತರಗತಿಯವರೆಗೆ. ಆದರೆ ಆಗಲೇ ಛದ್ಮವೇಷದಲ್ಲಿ ಭಾಗವಹಿಸಿ ಬಳಿಕ ತನ್ನ 15 ನೇ ವಯಸ್ಸಿನಲ್ಲಿಯೇ ನಾಟಕ ರಂಗವನ್ನು ಪ್ರವೇಶಿಸಿದ್ದರು.
ಇವರ ಸಹೋದರ ತಿಮ್ಮಪ್ಪ ಕುಲಾಲ್ ಕೂಡ ಪ್ರಬುದ್ಧ ಕಲಾವಿದ ಇವರು ಕೂಡ ನಾಟಕ,ತುಳುಚಲನಚಿತ್ರ ನಟನಾಗಿ ಕಾಣಿಸಿಕೊಂಡವರು.ಅಣ್ಣನೇ ತಮ್ಮ ಸುರೇಶ್ ಗೆ ಪ್ರೇರಣೆಯಾಗಿದ್ದಾರೆ. ದಿ.ಕೃಷ್ನ ಬಿ. ಅಜೆಕಲರವರು ನಾಟಕದ ಕುರಿತಾಗಿ ಒಂದಷ್ಡು ಮಾರ್ಗದರ್ಶನವಿತ್ತಿದ್ದಾರೆ.
ಎರಡು ದಶಕದಿಂದ ತಮ್ಮನ್ನು ತಾವು ಅಭಿನಯದಲ್ಲಿ ತೊಡಗಿಸಿಕೊಂಡಿರುವ ಸುರೇಶ್ ಇದೀಗ ಯಕ್ಷರಂಗ ಪ್ರವೇಶಿಸುತ್ತಿದ್ದಾರೆ.