ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ ಭೋಧನ ಸಮಾರಂಭ
ಬಂಟ್ವಾಳ: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ ಭೋಧನಾ ಸಮಾರಂಭ ನಡೆಯಿತು.
ಶಾಲಾ ಸಂಚಾಲಕರಾದ ಡಾ.ಎನ್.ವಿಶ್ವನಾಥ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲಾ ಸಂಸತ್ತಿನ ನೂತನ ಮಂತ್ರಿ ಮಂಡಲದ ಸರ್ವರಿಗೂ ಪ್ರಮಾಣ ವಚನ ಭೋಧಿಸಲಾಯಿತು.

ಬಿ.ಸಿ.ರೋಡ್ ನಗರ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ಗಣೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಎಳೆ ವಯಸ್ಸಿನಲ್ಲಿಯೇ ಪ್ರಜಾಪ್ರಭುತ್ವದ ವ್ಯವಸ್ಥೆಯ ಅರಿವನ್ನು ನೀಡುವುದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ಸಹಕಾರಿಯಾಗಬಲ್ಲದು ಎಂದರು.
ಶಾರದಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಎಂ.ಎನ್.ಕುಮಾರ್ ಮೆಲ್ಕಾರ್ ಅತಿಥಿಯಾಗಿ ಭಾಗವಹಿಸಿ ತನ್ನ ಪ್ರೌಢಶಾಲೆಯ ಹಂತದ ವಿದ್ಯಾಭ್ಯಾಸ ಜೀವನದ ಸವಿನೆನಪುಗಳನ್ನು ಮೆಲುಕು ಹಾಕಿದರು.
ಶಾಲಾ ಮುಖೋಪಾಧ್ಯಾಯರಾದ ಭೋಜ.ಕೆ ಅವರು ವಿದ್ಯಾರ್ಥಿಗಳಿಗೆ ಶುಭಕೋರಿದರು. ಅಧ್ಯಾಪಕರಾದ ಶಿವಪ್ಪ ನಾಯ್ಕ್ ಅವರು ವೇದಿಕೆಯಲ್ಲಿದ್ದರು. ಶಿಕ್ಷಕಿ ಸುಧಾ ನಾಗೇಶ್ ಕಾರ್ಯ ಕ್ರಮ ನಿರೂಪಿಸಿದರು. ಶಿಕ್ಷಕಿ ವೀಣಾ ವಂದಿಸಿದರು.