ಬಂಟ್ವಾಳ: ಎಸ್ .ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಜಿಲ್ಲಾವ್ಯಾಪಿ ಹಕ್ಕೊತ್ತಾಯ ಚಳುವಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬಿ.ಸಿ.ರೋಡಿನ ಭಾರತ್ ಬೀಡಿ ಸಂಸ್ಥೆಯ ಎದುರು ತುಟ್ಟಿಬತ್ತೆ ಹಾಗೂ ಕನಿಷ್ಠ ಕೂಲಿ ಜ್ಯಾರಿಗೊಳಿಸುವಂತೆ ಆಗ್ರಹಿಸಿ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಎಐಟಿಯುಸಿ ನೇತೃತ್ವದ ಯೂನಿಯನ್ ಗಳಾದ ಪಾಣೆಮಂಗಳೂರು ಫಿರ್ಕಾ ಬೀಡಿ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ಹಾಗೂ ಬಂಟ್ವಾಳ ತಾಲೂಕು ಬೀಡಿ ಮತ್ತು ಜನರಲ್ ಲೇಬರ್ ಯೂನಿಯನ್ ನ ಜಂಟಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಿ.ಎಸ್.ಬೇರಿಂಜ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಸಿಪಿಐ ಮಾಜೀ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿದರು.

ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ಅಧ್ಯಕ್ಷೆ ಉಮಾವತಿ ಕುರ್ನಾಡು, ಸಹಕಾರ್ಯದರ್ಶಿಗಳಾದ ಶಮಿತಾ, ಮಮತಾ, ಮಂಗಳೂರು ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ಅಧ್ಯಕ್ಷೆ ಸುಲೋಚನಾ, ಕೋಶಾಧಿಕಾರಿ ಎಂ.ಕರುಣಾಕರ ಮಾರಿಪಳ್ಳ, ಫೆಡರೇಶನ್ ನ ತಿಮ್ಮಪ್ಪ ಕೆ, ಬಂಟ್ವಾಳ ತಾಲೂಕು ಬೀಡಿ ಯೂನಿಯನ್ ನ ಅಧ್ಯಕ್ಷ ಬಿ.ಬಾಬು ಭಂಡಾರಿ, ಸಹ ಕಾರ್ಯದರ್ಶಿಗಳಾದ ಕೇಶವತಿ, ಹರ್ಷಿತ್, ಮೊದಲಾದವರಿದ್ದರು.
ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.
