ಅಮಾಯಕ ಹುಡುಗನ ಬಲಿಪಡೆದ ಬಸ್‌ನ ರಾಕ್ಷಸೀ ಕೃತ್ಯಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಗುರುಪುರ ಕೈಕಂಬದಲ್ಲಿ ಬಸ್‌ಗೆ ತಡೆ: ಶಾಸಕರು ಬರದೇ ಕದಲುವುದಿಲ್ಲ” ಶಾಸಕ ರಾಜೇಶ್ ನಾಯ್ಕ್ , ಡಾ.ವೈ ಭರತ್ ಶೆಟ್ಟಿ ಭರವಸೆ
ಕೈಕಂಬ: ಖಾಸಗಿ ಸಾರಿಗೆ ಬಸ್ಸಿನ ಧಾವಂತಕ್ಕೆ ಯುವಕನೋರ್ವ ಬಲಿಯಾದ ಘಟನೆ ಮಂಗಳೂರು- ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರದಲ್ಲಿ ನಡೆದಿದ್ದು ಸಾರ್ವಜನಿಕರನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾರ್ವಜನಿಕರು ಗುರುಪುರ ಕೈಕಂಬದಲ್ಲಿ ವಾಹನ ಸಂಚಾರಕ್ಕೆ ತಡೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಂತೋಷ್ ಪೂಜಾರಿ (೩೪) ಗುರುವಾರ ಗುರುಪುರದಲ್ಲಿ ಅಪಘಾತಕ್ಕೆ ಬಲಿಯಾಗಿದ್ದರ ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್‌ನ ವಾಮಂಜೂರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದ ತನ್ನ ಬೈಕ್‌ನಲ್ಲಿ ಮನೆಯಿಂದ ವಾಮಂಜೂರಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಬೈಗೆ ಹಿಂದಿನಿಂದ ಬಸ್ ಡಿಕ್ಕಿ ಹೊಡದಿತ್ತು. ಬಸ್ ಗುದ್ದಿದ ರಭಸಕ್ಕೆ ಸಂತೋಷ್ ರಸ್ತೆಯಿಂದ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಸಾವನ್ನಪ್ಪಿದ್ದರು.
ಅವಘಾತ ಎಸಗಿದ ಖಾಸಗಿ ಬಸ್ಸು ಗುರುಪುರ ಮಂಗಳೂರಿನತ್ತ ದಾವಿಸುತ್ತಿತ್ತು. ಮಂಗಳೂರಿಗೆ ಸಂಚರಿಸುವ ಮತ್ತೊಂದು ಬಸ್ಸಿಗೆ ಒಂದೆರಡು ನಿಮಿಷಗಳ ಅಂತರವಿದ್ದು ಎರಡೂ ಬಸ್ತುಗಳ ಟೈಮಿಂಗ್ ಮೇಲಾಟವೇ ಬಸ್ಸು ಅತೀ ವೇಗವಾಗಿ ಧಾವಿಸಲು ಕಾರಣವಾಗಿದೆ.ಅಲ್ಲದೇ ಹೆದ್ದಾರಿ ಬಸ್ಸುಗಳು ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಅಸಾಧ್ಯವಾಗುವುದರಿಂದ ಬಾಲಕರು ಅತೀ ವೇಗದ ಧಾವಂಶಕ್ಕೆ ಮುಂದಾಗುತ್ತಿದ್ದಾರೆ .
ಕೆಲ ದಿನಗಳ ಹಿಂದೆ ಮೂಡಬಿದ್ರಿ ಬಳಿ ಬಸ್ಸಿನ ಧಾವಂತಕ್ಕೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದು ಇದೀಗ ಮತ್ತೋರ್ವ ಯುವಕನನ್ನು ಬಲಿ ಪಡೆದಿರುವ ಬಸ್ಸಿನ ಧಾವಂತದ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಅದು ಇಂದು ಭುಗಿಲೆದ್ದಿದೆ.
ಇಂದು ಬೆಳಿಗ್ಗೆ ೯ ಗಂಟೆಗೆ ಗುರುಪುರ ಕೈಕಂಬ ಜಂಕ್ಷನಿಗೆ ಬಂದ ಸಾರ್ಬಜನಿಕರು ಬಸ್‌ಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಬಸ್ ಅನ್ನು ಸಂಚರಿಸಲು ಬಿಡದೆ ರಸ್ತೆಯಲ್ಲೇ ಘೋಷನೆ ಕೂಗಿ ಬಸ್‌ಗಳ ಆರ್ಭಟದ ವಿರುದ್ಧ ಕಿಡಿಕಾರಿದರು.
ನಿನ್ನೆಯ ಪ್ರತಿಭಟನೆಯ ಬಗ್ಗೆ ವಾಟ್ಸ್ಯಾಪ್‌ನಲ್ಲಿ ಮಾಹಿತಿ ನೀಡಿದ್ದರೂ ಬಸ್ ಬಂದ್ ಮಾಡುವ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ ಇಂದಿನ ಪ್ರತಿಭಟನೆ ಸಂಚರಿಸಲು ಬಿಡದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪ್ರಯಾಣಿಕರು ಕೈಕಂಬದಲ್ಲೇ ಸಿಲುಕಬೇಕಾಯಿತು. ಮಕ್ಕಳು ಶಾಲೆಗೆ ಹೋಗಲಾರದೆ ಮನೆಗೆ ಮರಳಿದರು. ದೂರದಿಂದ ಬಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಬಜಪೆ ಪೊಲೀಸರು ಆಗಮಿಸಿ ಸಾರ್ವಜನಿಕರನ್ನು ಶಾಂತಗೊಳಿಸಿದರೂ ಕೇಳದೆ ಬಸ್ ಸಂಚಾರಕ್ಕೆ ಅವಕಾಶ ಕೊಡಲಿಲ್ಲ. ಇತರ ವಾಹನಗಳಿಗೆ ಸಂಚಾರ ಕಲ್ಪಿಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮಾತನಾಡಿ, ಆಗಮಿಸಿ ಜನರಿಗೆ ಸಾಂತ್ವನ ನುಡಿದರು..ಹೆದ್ದಾರಿಯಲ್ಲಿ ಅಪಘಾತ ನಿರಂತರವಾಗಿದ್ದು, ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಗಿಯುವವರೆಗೆ ಇಲ್ಲಿ ರಾತ್ರಿ ೮ರ ಬಳಿಕ ಘನ ವಾಹನಗಳು ಸಂಚರಿಸಬೇಕು. ಈ ನಿಟ್ಟಿನಲ್ಲಿ ಜೂ. ೨೪ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ಆರ್‌ಟಿಒ, ಕಂದಾಯ ಅಧಿಕಾರಿಗಳು, ಬಸ್ ಮಾಲಕರ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಚರ್ಚಿಸಲಿದ್ದೇವೆ” ಎಂದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, “ಬಸ್‌ಗಳ ಟೈಮಿಂಗ್ ಸಮಸ್ಯೆಯಾಗಿದೆ. ಮೊದಲಾಗಿ ಟೈಮಿಂಗ್ ಸರಿಪಡಿಸಬೇಕಿದೆ. ಅಪಘಾತ ತಪ್ಪಿಸುವುದರೊಂದಿಗೆ ಜೀವಹಾನಿ ತಪ್ಪಿಸಬೇಕು. ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ವಾಹನ ದಟ್ಟಣಿ ಹೆಚ್ಚಿದ್ದು, ಘನ ವಾಹನಗಳಿಗೆ ಪರ್ಯಾಯ ಮಾರ್ಗ ಹುಡುಕಬೇಕಿದೆ. ವೇಗ ಮಿತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಯೋಚಿಸಬೇಕು. ನಾಳೆ ಡೀಸಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಹೆದ್ದಾರಿಗೆ ಸಂಬAಧಿಸಿದ ಹಲವು ಸಾಧಕ-ಬಾಧಕ, ಅಪಘಾತ ಹೆಚ್ಚಳ, ಟೈಮಿಂಗ್ ವಿಷಯದಲ್ಲಿ ಮಾತುಕತೆ ನಡೆಸಲಾಗುವುದು. ಸಂತೋಷ್ ಕುಟುಂಬಕ್ಕೆ ನ್ಯಾಯ ಒದಗಿಸುವುದರೊಂದಿಗೆ ಹೆದ್ದಾರಿ ವಾಹನಿಗರ ಹಿತ ಕಾಪಾಡುವುದು ಮುಖ್ಯವಾಗಿದೆ” ಎಂದರು.
ಬಸ್ ಸಿಬ್ಬಂದಿ ಕೂಡಾ ಟೈಮಿಂಗ್ ವಿಚಾರದಲ್ಲಿ ಆಗುವ ಎಡವಟ್ಟಿನ ಬಗ್ಗೆ ತಿಳಿಸಿದರು. ಜೊತೆಗೆ ಹೆದ್ದಾರಿ ಅಗಲೀಕರಣ ಆಗುವುದರಿಂದ ಅಸ್ತವ್ಯಸ್ಥೆ ಉಂಟಾಗಿದ್ದು ಅದನ್ನು ಸರಿಪಡಿಸಲು ಸೂಚಿಸುವುದಾಗಿ ಶಾಶಕದ್ವಯರು ಭರವಸೆ ನೀಡಿದರು. ನೀಡಿದರು.