ಮಾದಕ ವ್ಯಸನ ಮುಕ್ತ ಮಂಗಳೂರು ನಗರವಾಗಲು ಪಿ ಎಸ್ ಐ ರೇಖಾ ಕರೆ
ಮಂಗಳೂರು ; ಮಾದಕ ವ್ಯಸನವು ಯುವಜನತೆಗೆ ಶಾಪದ ರೀತಿಯಲ್ಲಿ ಅಂಟಿಕೊಂಡಿದೆ, ಇದರಿಂದಾಗಿ ಅನೇಕ ಸಂಸಾರ, ಕುಟುಂಬಗಳು ನೆಲಕಚ್ಚಿವೆ ಎಂದು ಬರ್ಕೆ ಪೋಲಿಸ್ ಠಾಣೆಯ ಪಿ.ಎಸ್. ಐ ರೇಖಾ ಆರ್ ಅವರು ಕಳವಳ ವ್ಯಕ್ತಪಡಿಸಿದರು.ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನಡೆದ “ಮಾದಕ ವ್ಯಸನದ ದುಷ್ಪರಿಣಾಮ”ದ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿ ಮಾದಕ ವ್ಯಸನ ಮುಕ್ತ ಮಂಗಳೂರು ನಗರವಾಗಲು ವಿದ್ಯಾರ್ಥಿಗಳು ಸಹಕರಿಸುವಂತೆ ಕೋರಿದರು.
ಇದೇ ವೇಳೆ ಸೈಬರ್ ಕ್ರೈಮ್ ಕುರಿತಂತೆಯೇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಶಾಲತಾ ಎಸ್ ಸುವರ್ಣ ಅವರು ಅಧ್ಯಕ್ಷತೆಯನ್ನು ವಹಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟದ ಕೋಶ, ಎನ್.ಸಿ.ಸಿ ಮತ್ತು ಮಹಿಳಾ ಕೋಶದಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ಅಧಿಕಾರಿ ಪ್ರವೀಣ್ ಎಸ್, ಮಹಿಳಾ ಕೋಶದ ಮುಖ್ಯಸ್ಥೆ ಡಾ. ನಿಶಾ ಮತ್ತು ಆಂತರಿಕ ಗುಣಮಟ್ಟದ ಕೋಶದ ಅಧಿಕಾರಿ ಯತೀನ್ ಉಪಸ್ಥಿತರಿದ್ದರು.