ಭಜನೆಗೆ ಮಹತ್ವದ ಶಕ್ತಿ ಇದೆ: ರಾಮಕೃಷ್ಣ ಕಾಟುಕುಕ್ಕೆ
ಬಂಟ್ವಾಳ : ನರಹರಿ ಪರ್ವತದಲ್ಲಿ ಪ್ರತಿ ಸೋಮವಾರ ನಡೆಯುವ ಸಂಧ್ಯಾ ಭಜನಾ ಕಾರ್ಯಕ್ರಮಕ್ಕೆ ದಾಸರಕೀರ್ತನ ಕಾರರಾದ ರಾಮಕೃಷ್ಣ ಕಾಟುಕುಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕಲಿಯುಗದಲ್ಲಿ ಭಜನಾ ಸಂಕೀರ್ತನೆಯಿಂದ ದೇವರು ಸಂಪ್ರೀತಗೊಂಡು ದೇವಳದ ಸಾನಿಧ್ಯವು ವೃದ್ಧಿಸುವುದು, ನಮ್ಮ ಆರೋಗ್ಯ ,ಸುಖ, ನೆಮ್ಮದಿ ಹೆಚ್ಚಾಗುವುದು. ನರಹರಿ ಪರ್ವತ ಜೀರ್ಣೋದ್ದಾರ ಯೋಜನೆಯನ್ನು ಇಟ್ಟುಕೊಂಡು ಇಂತಹ ಕಾರ್ಯಕ್ರಮ ಮಾಡಿದಾಗ ಅದು ಸಂತ್ಫಲವನ್ನು ನೀಡುವುದು ಎಂದು ಹೇಳಿದರು.
ಇದೇ ವೇಳೆ ತಿರುಪತಿ ವೆಂಕಟರಮಣ ಎಂಬ ಭಜನೆಯನ್ನು ಹಾಡಿ ಗಮನಸೆಳೆದರು. ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಡಾ| ಪ್ರಶಾಂತ್ ಮಾರ್ಲ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಡಾ| ಆತ್ಮರಂಜನ್ ರೈ, ಮೊಕ್ತೇಸರರಾದ ಸುಂದರ ಬಂಗೇರ, ಪ್ರತಿಭಾ ಎ.ರೈ , ಎಂ. ಎನ್. ಕುಮಾರ್, ಹಾಗೂ ಪ್ರಧಾನ ಅರ್ಚಕರಾದ ಪರಮೇಶ್ವರ ಮಯ್ಯ, ಅರ್ಚಕರಾದ ಉದಯ ಭಟ್ ಮೆನೇಜರ್ ಆನಂದ್ ಹಾಗೂ ಸದಸ್ಯರಾದ ದಾಮೋದರ್ ಮೆಲ್ಕಾರ್,ಕಿಶೋರ್ ಕುದ್ಮುಲ್, ಸತೀಶ್.ಪಿ. ಸಾಲ್ಯಾನ್, ಓಂ ಪ್ರಕಾಶ್, ವಿಠಲ ಆಚಾರ್ಯ, ನಾಗೇಶ್ ಬೋಳಂಗಡಿ , ಹರೀಶ್ ಗಾಣಿಗ ಬೋಳಂಗಡಿ, ದೀಕ್ಷೀತ್ ಬೋಳಂಗಡಿ
ಉಪಸ್ಥಿತರಿದ್ದರು. ಬಳಿಕ ನಡೆದ ಭಜನಾ ಸಂಕೀರ್ತನೆಯಲ್ಲಿ ಹೊನ್ನಪ್ಪರಕೋಡಿ ಬರಿಮಾರು ಶಂಕರ ಆಚಾರ್ಯ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು.