ಪರಿಸರ ಜಾಗೃತಿ ಶಿಬಿರದಲ್ಲಿ ಸಂಘದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಗಿಡ ನಾಟಿ ಮಾಡುವ ಮೂಲಕ ಜಾಗೃತಿ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ವಿಟ್ಲ ಪಡ್ನೂರು ಕಡಂಬು ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ. ವಿಟ್ಲ ಒಕ್ಕೂಟದ ವತಿಯಿಂದ ಪರಿಸರ ಜಾಗೃತಿ ಶಿಬಿರವನ್ನು ಆಯೋಜಿಸಿದ್ದು, ವಿಟ್ಲ ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಕೃಷ್ಣಯ ಬಲ್ಲಾಳ್ ಇವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನಂತರ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ನಂತರ ಪರಿಸರ ಜಾಗೃತಿ ಶಿಬಿರದಲ್ಲಿ ಸಂಘದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಗಿಡ ನಾಟಿ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಸದ್ರಿ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ.ಎಮ್.ಹಸೈನಾರ್ “ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮೂಲಕ ಮೂಡಿಸಿದಾಗ ಮುಂದಿನ ಪೀಳಿಗೆಗೆ ಉಪಯುಕ್ತ” ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಶುದ್ಧವಾದ ಗಾಳಿಯ ಮೂಲಕ ಉಸಿರಾಟ ಮಾಡಲು ಮರಗಿಡಗಳು ಹೆಚ್ಚು ಇದ್ದಾಗ ಮಾತ್ರ ಜನತೆಯ ಆರೋಗ್ಯ ಎಂದು ವಿವರಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ಚಿದಾನಂದ ಪರಿಸರ ಸಂರಕ್ಷಣೆ ಮತ್ತು ರಕ್ಷಣೆ ನಮ್ಮ ಪ್ರಮುಖ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ಮಕ್ಕಳಿಗೆ ಪರಿಸರದ ಬಗ್ಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜನಜಾಗೃತಿ ಸಮಿತಿಯ ಅಧ್ಯಕ್ಷರು ಕೃಷ್ಣಯ್ಯ ಬಳ್ಳಾಲ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಿ.ಎಮ್ ಹಸೈನಾರ್ ಅವರು ವಲಯ ಅಧ್ಯಕ್ಷರಾದ ಪ್ರಮೀಳ ಕೃಷಿ ಮೇಲ್ವಿಚಾರಕರು ಚಿದಾನಂದ ಸರ್ ವಲಯದ ಮೇಲ್ವಿಚಾರಕರಾದ ಸರಿತಾ ಒಕ್ಕೂಟದ ಅಧ್ಯಕ್ಷ ಹರೀಶ್ ಕುಲಾಲ್ ಶಾಲೆಯ ಮುಖ್ಯ ಶಿಕ್ಷಕರಾದ ರಾಮಚಂದ್ರ ಉಪಸ್ಥಿತರಿದ್ದರು. ವಿಟ್ಲ ಪಡ್ನೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು, ಶೌರ್ಯ ತಂಡದ ಸದಸ್ಯರು, ಸಂಘದ ಸದಸ್ಯರು ಶಿಕ್ಷಕ ವೃಂದ ಹಾಗೂ ಮಕ್ಕಳು ಭಾಗವಹಿಸಿದರು. ಸೇವಾ ಪ್ರತಿನಿಧಿ ಜಯರಾಮ್ ನಿರೂಪಿಸಿದರು. ಚಂದ್ರ ವಂದಿಸಿದರು.