ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಪರಿಸರದತ್ತ ಜೀವನ ಮತ್ತು ವಿನ್ಯಾಸ: ಉಪನ್ಯಾಸ ಕಾರ್ಯಕ್ರಮ
ಅಡ್ಯನಡ್ಕ: ವ್ಯಕ್ತಿ ಕೇಂದ್ರಿತ ಬದುಕಿಗಿಂತ ಸುಸ್ಥಿರ ಪರಿಸರದ ಅಭಿವೃದ್ಧಿ ಮುಖ್ಯವಾದುದು. ನಾವು ಬಳಸುವ ಪ್ರತಿಯೊಂದು ವಸ್ತುವೂ ಸಹ ಪರಿಸರದ ಕೊಡುಗೆ. ಪರಿಸರದ ಉಳಿವೇ ನಮ್ಮೆಲ್ಲರ ಉಳಿವು ಎಂದು ಬೆಂಗಳೂರಿನ ಸತ್ಯ ಕನ್ಸಲ್ಟೆನ್ಟ್ಸ್ನ ಸಂಸ್ಥಾಪಕರಾದ ಪ್ರೊ| ಸತ್ಯಪ್ರಕಾಶ್ ವಾರಣಾಶಿ ಅವರು ಹೇಳಿದರು.

ಅಡ್ಯನಡ್ಕದ ಜನತಾ ಪದವಿಪೂರ್ವ ಕಾಲೇಜು ಹಾಗೂಜನತಾ ಪ್ರೌಢಶಾಲೆಯ ಇಕೋ ಕ್ಲಬ್ಸಹಯೋಗದಲ್ಲಿ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜೂನ್ ೧೩ರಂದು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಪರಿಸರದತ್ತ ಜೀವನ ಮತ್ತು ವಿನ್ಯಾಸ’ವಿಷಯದಲ್ಲಿ ಉಪನ್ಯಾಸನೀಡಿದರು.
ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ವಾರಣಾಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಡಳಿತಾಧಿಕಾರಿ ಶ್ರೀ ರಮೇಶ ಎಂ ಬಾಯಾರು ಅವರು ಶುಭ ಹಾರೈಸಿದರು. ಜನತಾ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ರಾಜಗೋಪಾಲ ಜೋಶಿ ಅವರು ಕಾರ್ಯಕ್ರಮ ನಿರೂಪಿಸಿ, ಜನತಾ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಕೆ. ಆರ್. ಅವರು ವಂದಿಸಿದರು.