ಬಿ.ಸಿ.ರೋಡು: ಒಳಚರಂಡಿ ದುರಸ್ತಿ ಕೃತಕ ಕೆರೆಗೆ ಮುಕ್ತಿ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಭೂ ಅಭಿವೃದ್ಧಿ ಬ್ಯಾಂಕಿನ ಎದುರು ರಸ್ತೆಯಲ್ಲಿ ಪ್ರತೀ ರ‍್ಷದಂತೆ ಮಳೆಗಾಲದಲ್ಲಿ ಕೆಸರು ನೀರು ನಿಂತು ಉಂಟಾಗಿದ್ದ ಕೃತಕ ಕೆರೆ ಸಮಸ್ಯೆ ಸೋಮವಾರ ಸಂಜೆ ನಿವಾರಣೆಗೊಂಡಿತು.
ಗುತ್ತಿಗೆದಾರ ಸುದರ್ಶನ್ ಬಜ ಎಂಬವರು ಕಾರ್ಮಿಕರ ಮೂಲಕ ಚರಂಡಿ ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಟ್ಟರು. ಇಲ್ಲಿನ ವಾಹನ ಸವಾರರು ಮತ್ತು ಪಾದಚಾರಿಗಳ ಸಮಸ್ಯೆ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಭಾನುವಾರ ಸಚಿತ್ರ ವರದಿ ಪ್ರಕಟಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.