altAugvbHQc1qMEM3PMuYy0__b8CNoobwAWrNLbVMGPwc38

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾಷರ್ಿಕ ಜಾತ್ರೆಯಾದ ಚಂಪಾಷಷ್ಠಿ ಪ್ರಯುಕ್ತ ನಡೆಯುವ ಮಡೆಸ್ನಾನ ಹರಕೆ ಸೇವೆಯು ನ.25ರಿಂದ 27ರವರೆಗೆ ನಡೆಯಲಿದೆ. ಬುಧವಾರ ಮುಂಜಾನೆಯಿಂದಲೇ ಹರಕೆ ತೀರಿಸಿಕೊಳ್ಳಲು ಭಕ್ತರ ದಂಡೇ ಕುಕ್ಕೆಯಲ್ಲಿ ನೆರೆದಿದೆ. ಆದರೆ ಮಡೆಸ್ನಾನ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಹಾಗೂ ಧರಣಿ ಕಾರ್ಯಕ್ರಮವನ್ನು ಕನರ್ಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರು ಮಡೆಸ್ನಾನ ವಿರೋಧಿಸಿ ಘೋಷಣೆ ಕೂಗುತ್ತಿದ್ದಾರೆ.

ಸುಬ್ರಮಣ್ಯದಲ್ಲಿ ನಡೆಯುವ ನಿದರ್ಿಷ್ಟ ಸಮುದಾಯದ ಜನ ಉಂಡುಬಿಟ್ಟ ಎಂಜಲೆಲೆಯ ಮೇಲೆ ಭಕ್ತಾದಿಗಳು ನಡೆಸುವ ಉರುಳು ಸೇವೆ (ಮಡೆ-ಮಡೆಸ್ನಾನ) ಪದ್ಧತಿಯನ್ನು ನಿಲ್ಲಿಸಬೇಕೆಂದು ಹೈಕೋಟರ್್ ನೀಡಿದ್ದ ಆದೇಶವನ್ನು ಸುಪ್ರೀಂಕೋಟರ್್ ಎತ್ತಿಹಿಡಿದಿತ್ತು. ಆದರೆ, ಹೈಕೋಟರ್್ ವಿಭಾಗೀಯ ಪೀಠ ಮಡೆ-ಮಡೆಸ್ನಾನಕ್ಕೆ ಇರುವ ತಡೆಯನ್ನು ಕಳೆದವಾರ ತೆರವುಗೊಳಿಸಿತ್ತು. ಆದ್ದರಿಂದ ನ.25ರ ಬುಧವಾರದಿಂದ ನ.27ರವರೆಗೆ ನಿರಾತಂಕವಾಗಿ ಮಡೆಸ್ನಾನ ನಡೆಯಲಿದೆ.

ಮಡೆಸ್ನಾನವನ್ನು ಮುಂದುವರಿಸುವಂತೆ ಹೈಕೋಟರ್್ ನೀಡಿದ ಆದೇಶವನ್ನು ಖಂಡಿಸಿ, ಮಂಗಳವಾರ ಕನರ್ಾಟಕ ರಾಜ್ಯ ಹಿಂದುಳಿದ ವರ್ಗ ಜಾಗೃತಿ ವೇದಿಕೆ ಪ್ರತಿಭಟನೆ ನಡೆಸುತ್ತಿದ್ದು, ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು ಅಮಾನವೀಯ ಮತ್ತು ವಿಚಾರಹೀನ ಪದ್ಧತಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ

By suddi9

Leave a Reply

Your email address will not be published. Required fields are marked *