ಮೂಡುಬಿದಿರೆ: ಇತ್ತೀಚಿಗೆ ಜಿನೈಕ್ಯರಾದ ಶ್ಬೆರವಣಳಗೊಳದ ಭಟ್ಟಾರಕ ಕರ್ಮ ಯೋಗಿ ಶ್ರೀಗಳವರಿಗೆ ಮೂಡುಬಿದಿರೆಯಲ್ಲಿ ವಿನಯಾಂಜಲಿ ಪೂಜೆ ನಡೆಯಿತು.ಇಲ್ಲಿನ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಉಪಸ್ಥಿತಿ ಯಲ್ಲಿ ಎಂ 14 ರಿಂದ 18 ರ ವರೆಗೆ ಮೂಡುಬಿದಿರೆಯ 18 ಬಸದಿ ಗಳಲ್ಲಿ ಗೋಷ್ಠಿ ಪೂಜೆ ಸಾವಿರ ಕಂಬ ಬಸದಿ ಯಲ್ಲಿ 108 ಕಲಶ ಅಭಿಷೇಕ , ಶ್ರೀ ಮಠ, ಪಡು ಬಸದಿ ಗಳಲ್ಲಿ ವಿಶೇಷ ಪೂಜೆ ನೆರವೇರಿತು.

ಕಳೆದ ಐದು ದಶಕ ಗಳಲ್ಲಿ ಬೆಳಗೊಳ ಪೀಠ ದ ಭಟ್ಟಾರಕ ರಾಗಿ ಧರ್ಮ ಶಿಕ್ಷಣ ಆರೂಗ್ಯ, ಸಮಾಜ ಸೇವೆಗೆ ತಮ್ಮ ಜೇವನ ಮೂಡಿ ಪಾಗಿಟ್ಟ ಶ್ರೇಷ್ಠ ಸಾಧಕ ಸ್ವರ್ಗಸ್ಥ ಕರ್ಮ ಯೋಗಿ ಸ್ವಾಮೀಜಿ,ಮೂಡುಬಿದಿರೆ ಯ ಹಿಂದಿನ ಹಾಗೂ ಈಗಿನ ಸ್ವಾಮೀಜಿ ಸೇರಿದಂತೆ ಸುಮಾರು 12 ಪಟ್ಟಾಚಾರ್ಯರಿಗೆ ದೀಕ್ಷೆ ನೀಡಿ ದಕ್ಷಿಣ ಭಾರತದ ಕ್ಷೇತ್ರಗಳ ಜೀರ್ಣೋದ್ದಾರ, ಧರ್ಮ ಜಾಗೃತಿ ಗೆ ವಿಶೇಷ ಪರಿಶ್ರಮ ಪಟ್ಟವರು.
ಮೂರು ವರ್ಷ ಪೂರ್ವದಲ್ಲೇ ಸಲ್ಲೇಖನ ಸಮಾಧಿ ಮರಣ ಸಂಕಲ್ಪ ಕೈಗೊಂಡು ಧರ್ಮ ಸಾಧನೆ ಯಲ್ಲಿದ್ದ ಗುರು ಬೆಳಗೊಳದ ಹಿರಿಯ ಸ್ವಾಮೀಜಿ ಯವರ ಆತ್ಮಕ್ಕೆಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ
ಎಂದು ಭಗವಾನ್ ಚಂದ್ರ ನಾಥ ಸ್ವಾಮಿ ಪಾರ್ಶ್ವ ನಾಥ ಸ್ವಾಮಿ ಯವರಲ್ಲಿ ಪ್ರಾರ್ಥಿಸಿ ಭಕ್ತಿ ಪೂರ್ವಕ ವಿನಾಯಾಂಜಲಿ ಅರ್ಪಿಸುವುದಾಗಿ ಮೂಡು ಬಿದಿರೆಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ
ತಿಳಿಸಿದರು. ನಮೋಕಾರ ಮಂತ್ರ ಪಠಿಸಿ ಆಗಮಿಸಿದ ಎಲ್ಲಾ ಧರ್ಮ ಬಂಧು ಗಳು ಸಾವಿರ ಕಂಬ ಬಸದಿ ಯಲ್ಲಿ ಸಾಮೂಹಿಕ ಸದ್ಗತಿ ಪ್ರಾರ್ಥನೆ ವಿನಾಯಾ oಜಲಿಸಭೆ ಯಲ್ಲಿ ಪಾಲ್ಗೊಂಡರು
ಸಾವಿರ ಕಂಬ ಬಸದಿ ಯಲ್ಲಿ 108 ಕಲಶ ಅಭಿಷೇಕ ಉಸ್ಸವ ಪೂರ್ಣ ಗೊಳ್ಳುತ್ತಿದ್ದಂತೆ ಮಹಾ ಶಾಂತಿ ಧಾರದ ಸಂಧರ್ಭ ಬಸದಿ ಪರಿಸರ ದಲ್ಲಿ ಸುರಿದ ಮಳೆ ಋ ವಿಶೇಷ ವಾಗಿತ್ತು ಇದು ಶುಭ ಪ್ರತೀಕ ಎಂದು ಶ್ರೀ ಗಳವರು ನುಡಿದರು
ಮಾಜಿ ಸಚಿವ ಕೆ. ಅಭಯ ಚಂದ್ರ, ಜೈನ್,ಪಟ್ಣ ಶೆಟ್ಟಿ ಸುದೇಶ್, ಬಸದಿ ಮುಕ್ತೇಸರರಾದ ದಿನೇಶ್ ಆನಡ್ಕ, ಆದರ್ಶ್, ಮಿಥುನ್ ರೈ, ಬಾಹುಬಲಿ ಪ್ರಸಾದ್ ಕೆ. ಜೆ ಬೆಂಗಳೂರು ಸಂಪತ್ ಸಾಮ್ರಾಜ್ಯ,ಪದ್ಮ ಪ್ರಸಾದ್, ಅನಿಲ್ ಸೇಠಿ ಬೆಂಗಳೂರು, ವಿನೋದ್ ದೊಡ್ಡ ಣ್ಣ ,ಬೆಳಗಾವಿ ಕೀರ್ತಿ ವರ್ಮ,ವಜ್ರ ನಾಭ ಚೌಟ, ನಲ್ಲೂರು ಮುಕ್ತೇ ಸರರು, ಮಹಾವೀರ್ ಜೈನ್ ಹಚ್ಚಾ ಡಿ ನವೀನ್ ಚಂದ್ ಬಲ್ಲಾಳ್ ಪ್ರವೀಣ್ ಚಂದ್ರ ಮೊದಲಾದ ವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *