ಬಂಟ್ವಾಳ : ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ಈಗಾಗಲೇ ಘೋಷಣೆ ಮಾಡಿರುವ ಗ್ಯಾರಂಟಿ ಕೊಡುಗೆಗಳು ಜನತೆಗೆ ಲಭಿಸುವುದು ನಿಶ್ಚಿತ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಭರವಸೆ ನೀಡಿದರು.





ಬಂಟ್ವಾಳ ತಾ.ನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಜಂಕ್ಷನ್ ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕೆ.ಪಿ.ಸಿ.ಸಿ. ಸದಸ್ಯ ಪಿಯೂಸ್ ರಾಡ್ರಿಗಸ್, ಜಿ. ಪಂ. ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಪಕ್ಷದ ಪ್ರಮುಖರುಗಳಾದ ಸುಧಾಕರ್ ಶೆಣೈ, ಮಾಯಿಲಪ್ಪ ಸಾಲ್ಯಾನ್, ಪಿ. ಎ. ರಹೀಮ್, ಮೋನಪ್ಪ ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಜಾನ್, ಅಸ್ಲಾಂ ಆಜೀಜ್, ರಕ್ಷಿತಾ, ಡೀಕಯ್ಯ ಬಂಗೇರ, ಜಯ ಬಂಗೇರ, ಸದಾಶಿವ ಬಂಗೇರ, ವಸಂತ ಮಿತ್ತೊಟ್ಟು, ರಾಮಚಂದ್ರ ಪೂಜಾರಿ, ಬಾಬು ಪೂಜಾರಿ, ಅಬ್ದುಲ್ಲಾ, ಪುಷ್ಪಲತಾ ಮೋಹನ್, ಸದಾನಂದ ಶೆಟ್ಟಿ, ಬಾಲಕೃಷ್ಣ ಅಂಚನ್, ಆನಂದ ಪೂಜಾರಿ ಕರ್ಲ, ವಿಠಲ ಕರ್ಲ ಉಮೇಶ್ ಬೋಳಂತ್ತೂರು, ಬಾಲಕೃಷ್ಣ ಪ್ರಭು, ಪದ್ಮನಾಭ ಸಾಮಂತ್,ವಿಕ್ಟರ್ ದೈಕಿನಕಟ್ಟೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *