ಬಂಟ್ವಾಳ: ಎಸ್ ಡಿ ಪಿ ಐ ಯಿಂದ ಎರಡು ನಾಮಪತ್ರ ಸಲ್ಲಿಕೆ
ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ.ಅಧಿಕೃತ ಅಭ್ಯರ್ಥಿ ಇಲ್ಯಾಸ್ ಮಹಮ್ಮದ್ ತುಂಬೆ ಹಾಗೂ ಡಮ್ಮಿ ಅಭ್ಯರ್ಥಿಯಾಗಿ ವಕೀಲ ಅಬ್ದುಲ್ ಮಜೀದ್ ಖಾನ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.ಬಿ.ಸಿ.ರೋಡಿನ ಕೈಕಂಬದಲ್ಲಿರುವ ಪಕ್ಷದ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಬಂದು ಬಳಿಕ ಚುನಾವಣಾಧಿಕಾರಿ ಅಬಿಧ್ ಗದ್ಯಾಲ್ ಅವರಲ್ಲಿ ನಾಮಪತ್ರ ಸಲ್ಲಿಸಿದರು.
ಇದಕ್ಕು ಮುನ್ನ ಪಕ್ಷದ ರಾಷ್ಟ್ರೀಯ ಚುನಾವಣಾ ವೀಕ್ಷಕ ಇ.ಎಂ.ಫೈಜಲ್ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ ಬಂಟ್ವಾಳದಲ್ಲಿ ಇಲ್ಯಾಸ್ ತುಂಬೆ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.ಮಂಗಳೂರು ಕ್ಷೇತ್ರದ ಎಸ್. ಡಿ.ಪಿ.ಐ.ಪಕ್ಷದ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ,ಬಂಟ್ವಾಳ ಕ್ಷೇತ್ರದ ಎಸ್.ಡಿ.ಪಿ.ಐ.ಪಕ್ಷದ ಅಭ್ಯರ್ಥಿ ಇಲ್ಯಾಸ್ ತುಂಬೆ ಮಾತನಾಡಿದರು.
ಪ್ರಮುಖರಾದ ಮೊನಿಸ್ ಆಲಿ, ಸಾಹುಲ್ ಹಮೀದ್, ಶಾಕೀರ್ ,ಹೈದರ್, ಮುಸ್ತಾಫ, ಅಕ್ಬರ್ ಆಲಿ, ಯೂಸುಫ್ ಆಲಡ್ಕ,ಝೀನತ್ ಗೂಡಿನಬಳಿ,ಇದ್ರೀಸ್,ಆಶ್ರಫ್ ಅಡೂರು,ಕಲಂದರ್ ,ಶಾಕಿರ್ ವಿಟ್ಲ,ಖಾದರ್ ಫರಂಗಿಪೇಟೆ,ಅನ್ವರ್ ಬಡಕಬೈಲ್, ಸಾಹಿದಾ ತಸಿನೀಮ್,ಶಂಶಿದ್ ಗೂಡಿನಬಳಿ ಮತ್ತಿತರರು ಉಪಸ್ಥಿತರಿದ್ದರು.