ಬಂಟ್ವಾಳ:ಇಲ್ಲಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ಪ್ರಧಾನ ಕಚೇರಿ ಹೊಂದಿರುವ ಪ್ರತಿಷ್ಠಿತ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 11ನೇ ಶಾಖೆ ಇದೇ 2 ರಂದು ಬೆಳಿಗ್ಗೆ 10 ಗಂಟೆಗೆ ಸಾಲೆತ್ತೂರು ರಥನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.

ಕಳೆದ 1991ರಲ್ಲಿ ಮೂರ್ತೆದಾರಿಕೆ ಕುಲ ಕಸುಬುದಾರರ ಶ್ರೇಯೋಭಿವೃದ್ಧಿ ಸಂಘ ಆರಂಭಗೊಂಡು, 2005ರಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿದೆ. ಒಟ್ಟು 25 ಶಾಖೆ ಹೊಂದಿರುವ ಈ ಸಹಕಾರಿ ಸಂಘವು ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ಧ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ, ಎನ್.ಸಿ.ರೋಡು ಮತ್ತಿತರ ಕಡೆಗಳಲ್ಲಿ ಶಾಖೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

