ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಸಂಜೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಸ್ಥಳೀಯ ಕೋರ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹೊರಟ ಭವ್ಯ ಮೆರವಣಿಗೆಗೆ ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ ಚಾಲನೆ ನೀಡಿದರು.


ಚೆಂಡೆ, ಕೊಂಬು, ಡೊಳ್ಳು, ವಾದ್ಯ ನಾಸಿಕ್ ಬ್ಯಾಂಡ್ ಸಹಿತ ವಿವಿಧ ನೃತ್ಯ ಭಜನಾ ತಂಡಗಳು, ಸಾವಿರಾರು ಮಂದಿ ಸಮವಸ್ತ್ರಧಾರಿ ಮಹಿಳೆಯರು, ಗೊಂಬೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚಿನ ವತಿಯಿಂದಲೂ ಹೊರೆಕಾಣಿಕೆ ಸಮರ್ಪಿಸಿ ಗಮನ ಸೆಳೆದರು.


ಕೋರ್ಯಾರು ಕ್ಷೇತ್ರದ ಗುರಿಕಾರ ಗೋಪಾಲ ಗೌಡ, ಉದ್ಯಮಿ ಐತಪ್ಪ ಆಳ್ವ ಬಿ.ಸಿ.ರೋಡ್, ಸಿದ್ದಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಕೊಯಿಲ ಶ್ರೀ ಮಹಾಗಣಪತಿ ದೇವಳದ ಮೊಕ್ತೇಸರ ಎಂ.ಪದ್ಮರಾಜ್ ಬಲ್ಲಾಳ್ ಮಾವಂತೂರು, ಸಂಗಬೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ ಪೂಜಾರಿ ಅಳಕೆ, ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸಿದ್ಧಕಟ್ಟೆ ಬಂಟರ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ, ಫಲ್ಗುಣೆ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಆರಂಬೋಡಿ, ಜೀರ್ಣೊದ್ದಾರ ಸಮಿತಿ ಗೌರವಾಧ್ಯಕ್ಷ ಕೆ.ಮೋಹನ್ ಶೆಟ್ಟಿಗಾರ್ ಉಜಿರೆ, ಅಧ್ಯಕ್ಷ ಗಣೇಶ ಶೆಟ್ಟಿಗಾರ್ ಬೋಳಂಗಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದತ್ತರಾಜ್ ಶೆಟ್ಟಿಗಾರ್ ಕೊಯಿಲ , ಹೊರೆಕಾಣಿಕೆ ಸಮಿತಿ ಅಧ್ಯಕ್ಷ ನೋಣಯ ಶೆಟ್ಟಿಗಾರ್ ಮೊಯಿಲೊಟ್ಟು, ಪ್ರಮುಖರಾದ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಹೇಮಚಂದ್ರ ಶೆಟ್ಟಿಗಾರ್, ಅರ್ಕಕೀರ್ತಿ ಇಂದ್ರ, ಪಿಡಿಒ ಗಣೇಶ ಶೆಟ್ಟಿಗಾರ್, ವಾಸುದೇವ ಆಚಾರ್ಯ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *