“ಸದೃಢ ಆರೋಗ್ಯದಿಂದ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ ”- ಡಾ.ಗಣೇಶ್ ಕಾಮತ್
ಉಡುಪಿ: ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ.ಇಂದಿನ ಯುವ ಸಮೂಹವು ತಮ್ಮ ಮತ್ತು ತಮ್ಮವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ.ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವು ಎಲ್ಲರನ್ನೂ ತಲುಪಲಿ.” ಎಂದು ಡಾ.ಗಣೇಶ್ ಕಾಮತ್ ಹಾರೈಸಿದರು.ಅವರು ಇನ್ನಂಜೆಯ ಎಸ್.ವಿ.ಹೆಚ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ವಾರ್ಷಿಕ ವಿಶೇಷ ಶಿಬಿರದ ವತಿಯಿಂದ ಉಡುಪಿಯ ಲೋಂಬೋರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಸಹಯೋಗದೊಂದಿಗೆ ಇನ್ನಂಜೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ವೈದ್ಯರುಗಳಾಗಿ ಡಾ.ಗಣೇಶ್ ಕಾಮತ್, ಡಾ.ಅರ್ಜುನ್ ಬಲ್ಲಾಳ್, ಡಾ.ರೋಹಿ ರತ್ನಾಕರ್ ಭಾಗವಹಿಸಿದ್ದರು. ಎಸ್ ಪಿ.ಇ.ಸಿ. ಯ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ.ಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಪ್ರಭು, ಕಾಲೇಜಿನ ಎಸ್.ಎಸ್.ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್ ಕೆ.ಶೇರಿಗಾರ್ ಹಾಗೂ ಡಾ.ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು. ಕುಮಾರಿ ಧನ್ಯಾ ಕಾರ್ಯಕ್ರಮ ನಿರೂಪಿಸಿದರು.